ಬಾಗಲಕೋಟೆ17: ಹುನಗುಂದ ತಾಲೂಕಿನ ಹಿರೇಮಾಗಿ ಸರಕಾರಿ ಪ್ರೌಢಶಾಲೆಗೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅನಿರೀಕ್ಷಿತವಾಗಿ ಭೇಟಿ ನೀಡಿ ಶಾಲಾ ಚಟುವಟಿಕೆಗಳನ್ನು ಪರಿಶೀಲಿಸಿದರು.
ಬುಧವಾರ ಶಾಲಾ ಪ್ರಾರಂಭದ ಸಮಯದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಇಬ್ಬರು ಶಿಕ್ಷಕರು ಹೊರತುಪಡಿಸಿ ಉಳಿದ ಐದು ಜನ ಶಿಕ್ಷಕರು ಗೈರು ಇರುವದರ ಬಗ್ಗೆ ವಿಚಾರಿಸಿ ಶಾಲಾ ಮಕ್ಕಳಿಂದ ಮಾಹಿತಿ ಪಡೆದರು. ಅಲ್ಲದೇ ಶಾಲಾ ಮುಖ್ಯೋಪಾದ್ಯಾಯಿನಿ ರಜಾ ಚೀಟಿ ಇಟ್ಟು ತದನಂತರ ಹಾಜರಿ ಹಾಕುತ್ತಿರುವುದು ಗಮನಕ್ಕೆ ಬಂದಿತು. ಈ ಕುರಿತು ವಿಚಾರಿಸಿದಾಗ ಹಲವು ಮಕ್ಕಳು ಮುಖ್ಯೋಪಾದ್ಯಾಯರ ವಿರುದ್ದ ದೂರುಗಳನ್ನು ನೀಡಿದರು.
ಸರಕಾರ ಮಕ್ಕಳಿಗಾಗಿ ಪಠ್ಯ ಪುಸ್ತಕ, ಸಮವಸ್ತ್ರ ನೀಡುತ್ತಿದ್ದು, ಸಮವಸ್ತ್ರಕ್ಕಾಗಿ ಮಕ್ಕಳಿಂದ ಹಣ ವಸೂಲಿ ಮಾಡುತ್ತಿರುವುದು ವಿದ್ಯಾಥರ್ಿಗಳಿಂದ ತಿಳಿದುಬಂದಿತು. ತಾವು ಹೇಳಿದಲ್ಲಿ ಬಟ್ಟೆಗಳನ್ನು ಹೊಲಿಸುವಂತೆ ಆಜ್ಞಾಪಿಸುತ್ತಿರುವುದಾಗಿ ಮಕ್ಕಳು ತಿಳಿಸಿದರು. ಅಲ್ಲದೇ ಶಾಲಾ ಪ್ರಾರಂಭದಲ್ಲಿ ಅಧ್ಯಕ್ಷರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಜಿ.ಪಂ ಅನುದಾನದಲ್ಲಿ ಕೊಡಮಾಡಲಾಗಿದ್ದ ಪರಿಕರಗಳ ಮೇಲೆ ಅನುದಾನದ ಹೆಸರು, ವರ್ಷ ನಮೂದಿಸಿರಲಿಲ್ಲ. ಇದನ್ನು ಕಂಡು ಅಲ್ಲಿದ್ದ ಶಿಕ್ಷಕರಿಗೆ ಹೆಸರು ನಮೂದಿಸಲು ಸೂಚಿಸಿದರು
.