ನಿರುದ್ಯೋಗ ದೇಶದ ಗಂಭೀರ ಸಮಸ್ಯೆ : ಬಾಗವತ್ ಗೆ ಓವೈಸಿ ತಿರುಗೇಟು

ಹೈದರಾಬಾದ್, ಜ19  :     ಹೆಚ್ಚಿನ ಜನಸಂಖ್ಯೆ ದೇಶದ ಸಮಸ್ಯೆಯಲ್ಲ, ಬದಲಾಗಿ ನಿಜವಾದ ಸಮಸ್ಯೆ ನಿರುದ್ಯೋಗ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ತಿರಗೇಟು ನೀಡಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು. ಹೀಗಾಗಿ ಪ್ರತಿ ದಂಪತಿಗೆ ಎರಡು ಮಕ್ಕಳ ಮಿತಿ ಹಾಕಬೇಕು ಎಂದು ಆರ್  ಎಸ್ ಎಸ್  ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಓವೈಸಿ ಈ ರೀತಿ ತಿರುಗೇಟು ಕೊಟ್ಟಿದ್ದಾರೆ. 

ನನಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಬಹುತೇಕ ಬಿಜೆಪಿ ನಾಯಕರಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಆದರೂ ಆರ್ ಎಸ್ ಎಸ್ ನವರಿಗೆ ಮುಸ್ಲಿಂ ಜನಸಂಖ್ಯೆ ನಿಯಂತ್ರಣದ ಕಾಳಜಿಯಿದೆ. ಈ ದೇಶದ ನಿಜವಾದ ಸಮಸ್ಯೆ ಇರುವುದು ಜನಸಂಖ್ಯೆಯಲ್ಲ ಬದಲಾಗಿ  ನಿಜವಾದ ಸಮಸ್ಯೆ ನಿರುದ್ಯೋಗ  ಇದನ್ನು ಸರಿಯಾಗಿ ಬಿಜೆಪಿ ನಾಯಕರು ಆಡಳಿತ  ಮಾಡುವವರು ಸರಿಯಾಗಿ ಅರಿಯಬೇಕು ಎಂದು ಹೇಳಿದ್ದಾರೆ.   

ಆರ್ ಎಸ್ ಎಸ್ ಮುಖ್ಯಸ್ಥ ಭಾಗವತ್ ವಿರುದ್ಧ   ವಾಗ್ದಾಳಿ ಮುಂದುವರಿಸಿದ ಓವೈಸಿ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನೀವು ಎಷ್ಟು ಜನ ಯುವಕರಿಗೆ ಉದ್ಯೋಗ ಕೊಟ್ಟಿದ್ದೀರಿ  ಎಂದೂ  ಪ್ರಶ್ನೆ ಮಾಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧವು ವಾಗ್ದಾಳಿ ನಡೆಸಿದ ಓವೈಸಿ, ಕೇಂದ್ರ ಸರಕಾರ ನಿರುದ್ಯೋಗ ನಿವಾರಣೆಗೆ   ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.