ಮುಂಬೈದಿಂದ ಆಗಮಿಸಿದ ವ್ಯಕ್ತಿಗೆ ಕ್ವಾರೈಂಟೈನ್ಗೆ ಒಳಗಾಗುವಂತೆ ತಿಳುವಳಿಕೆ

ಲೋಕದರ್ಶನ ವರದಿ

ಬೈಲಹೊಂಗಲ 13:  ಮುಂಬೈದಿಂದ ಆಗಮಿಸಿದ ವ್ಯಕ್ತಿಗೆ ಕ್ವಾರೈಂಟೈನ್ಗೆ ಒಳಗಾಗುವಂತೆ ತಿಳಿ ಹೇಳಿದ ಪೋಲಿಸರ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಹೊಳಿಹೊಸೂರ ಗ್ರಾಮದಲ್ಲಿ ನಡೆದಿದೆ.

    ಮುಂಬೈನಿಂದ ಹೊಳಿಹೊಸುರ ಗ್ರಾಮಕ್ಕೆ ಚಂದ್ರಪ್ಪ ಗಾಣಗಿ ಎಂಬುವರ ಮನೆಗೆ  ಹಷರ್ಾ ತೇಲಿ (28) ಎಂಬುವವರು ತನ್ನ ತಾಯಿ ಭಾರತಿ ತೇಲಿ, ತಂದೆ ಅಣಪ್ಪ ತೇಲಿ, ಅವರನ್ನು ಕರೆದುಕೊಂಡು ಹೊಳಿಹೊಸುರ ಗ್ರಾಮಕ್ಕೆ ಬಂದಿದ್ದರು. ಇದರ ಮಾಹಿತಿ ತಿಳಿದು ಗ್ರಾಮ ಪಂಚಾಯತ ಸಿಬ್ಬಂದಿ ಹಾಗೂ ಆರೋಗ್ಯ ಅಧಿಕಾರಿಗಳು ದಯವಿಟ್ಟು ನೀವು ಕ್ವಾರಂಟೈನ್ ಆಗಬೇಕು ಎಂದು ತಿಳಿ ಹೇಳಿದ್ದಾರೆ. ಅದಕ್ಕೆ ಬೆಲೆ ನೀಡದೇ ಮನೆಯಲ್ಲಿಯೇ ಉಳಿದಿದ್ದರಿಂದ ಪೋಲಿಸ್ ಪೇದೆ ಮಹಾಂತೇಶ ಮೇಟಿ ಅವರು ನೀವು ನೇರವಾಗಿ ಮನೆಗೆ ಬರುವಂತಿಲ್ಲ. ಸುಮಾರು 10 ದಿನಗಳವರೆಗೆ ಕ್ಯಾರಂಟೈನ್ ಆಗಿ  ಮನೆಗೆ ಹೋಗಬೇಕೆಂದು ತಿಳಿಸಿದ್ದಾರೆ. ಇದಕ್ಕೆ ಆ ಮನೆಯ ಸದಸ್ಯ ಶಶಿಧರ ಗಾಣಗಿ ಎಂಬಾತ ಆಗುವದಿಲ್ಲ ಎಂದು ವಾದಿಸಿದ್ದಾನೆ. ಮನೆಗೆ ನೀವು ಹೋಗುವಂತಿಲ್ಲ ಮೊದಲು ಹೊರಗೆ ಬನ್ನಿ ಎಂದು ಒತ್ತಾಯ ಮಾಡಿದಾಗ ಪೋಲಿಸ್ ಅಧಿಕಾರಿಯ ಶಟರ್್ ಹಿಡಿದು ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

   ತಹಶಿಲ್ದಾರ ದೊಡ್ಡಪ್ಪ ಹೂಗಾರ ಮಾತನಾಡಿ, ಕೊರೊನಾ ವೈರಸ್ ಬಹಳಷ್ಟು ಅಪಾಯಕಾರಿ ನೀವು ಮನೆಗೆ ಹೋಗುವಂತಿಲ್ಲ. ಸ್ಥಳೀಯ ಆರೋಗ್ಯ ಅಧಿಕಾರಿಗಳ ಹಾಗೂ ಗ್ರಾ.ಪಂ ಸಿಬ್ಬಂದಿಗಳ ಮಾತಿಗೆ ಬೆಲೆಕೊಟ್ಟು ನೀವು ಬೈಲಹೊಂಗಲ ನಗರದ ಮೊರಾಜರ್ಿ ದೇಸಾಯಿ ಶಾಲೆಗೆ ಕ್ಯಾರಂಟೈನ್ ಆಗಬೇಕು ಎಂದು ತಿಳಿಹೇಳಿದ್ದಾರೆ. 

ಬೈಲಹೊಂಗಲ ಪಿ.ಎಸ್.ಆಯ್ ಮಲ್ಲಪ್ಪ ಹೂಗಾರ ಮಾತನಾಡಿ ಪೋಲಿಸ್ ಅಧಿಕಾರಿಗಳು ಇರುವುದು ಜನರ ರಕ್ಷಣೆಗಾಗಿ ಅವರ ಜೊತೆ ಉತ್ತಮವಾಗಿ ವತರ್ಿಸಿ ಎಂದು ತಿಳಿಸಿದರು.  ಪೋಲಿಸರ ಜೊತೆ ವಾದಿಸಿರುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. 

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಸಮೀರ ಮುಲ್ಲಾ, ಗ್ರಾಮಸ್ಥರಾದ ಈರಣ್ಣಾ ಹಲಕಿ, ರಾಜೂಗೌಡ ಪಾಟೀಲ, ಬಸವಾಣೆಪ್ಪ ಬನ್ನೂರ, ಈರನಗೌಡ ಪಾಟೀಲ ಗ್ರಾ ಪಂ ಅಭಿವೃದ್ಧಿ ಅಧಿಕಾರಿ, ಆಶಾ ಆರ್, ನೇಗಿನಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಮಹಾಂತೇಶ ಹಿರೇಮಠ,  ಕಾರ್ಯದಶರ್ಿ ನಿಂಗಪ್ಪ ಮಾಳಗಿ, ಮತ್ತಿತ್ತರರು ಉಪಸ್ಥಿತರಿದ್ದರು.