ಅಂಡರ್-15 ಮಹಿಳಾ ಸ್ಯಾಫ್ ಫುಟ್ಬಾಲ್: ಭಾರತ ಚಾಂಪಿಯನ್

ಥಿಂಪು (ಭೂತಾನ್), ಅ.16:   ಭಾರತದ ಮಹಿಳಾ ಫುಟ್ಬಾಲ್ ತಂಡವು ಇಲ್ಲಿ ನಡೆದಿರುವ ಅಂಡರ್-15 ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಶಿಪ್ ಫೈನಲ್ ನ ಶೂಟೌಟ್ ನಲ್ಲಿ 5-3 ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಟ್ಟಿದೆ.  

ಎರಡೂ ತಂಡಗಳು ಆರಂಭದಲ್ಲಿ ಆಕ್ರಮಣಕಾರಿ ಆಟ ಆಡಿದವು. ಪಂದ್ಯದಲ್ಲಿ ಭಾರತಕ್ಕೆ ಪೆನಾಲ್ಟಿ ಶೂಟೌಟ್ ಅವಕಾಶ ಲಭಿಸಿದರೂ, ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಹೀಗಾಗಿ ಪಂದ್ಯದ ಫಲಿತಾಂಶ ಅರಿಯಲು ಶೂಟೌಟ್ ಮೊರೆ ಹೋಗಲಾಯಿತು.  

ಶೂಟೌಟ್ ನಲ್ಲಿ ಭಾರತ ಐದು ಅವಕಾಶದಲ್ಲಿ ಗೋಲು ಬಾರಿಸಿ ಅಬ್ಬರಿಸಿತು. ಆದರೆ, ಎದುರಾಳಿ ತಂಡ ಮೂರು ಬಾರಿ ಚೆಂಡನ್ನು ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿತು. ಭಾರತದ ಪರ ಕೊನೆಯ ಗೋಲ್ ನಾಯಕಿ ಶಿಲ್ಕಿ ದೇವಿ ಬಾರಿಸಿದರು