ಅನಧಿಕೃತ ನಳ: ಆರೋಪ ಸತ್ಯಕ್ಕೆ ದೂರು

ಲೋಕದರ್ಶನ ವರದಿ

ಬೈಲಹೊಂಗಲ 12: ತಾಲೂಕಿನ ಸೋಮನಟ್ಟಿ ಗ್ರಾಮದಲ್ಲಿ  ಗ್ರಾಮ ಪಂಚಾಯತ ಸದಸ್ಯ ಶಿವಪ್ಪ ಚೋಬಾರಿ ಇವನು ತನ್ನ ಮನೆಗೆ ಅನಧಿಕೃತವಾಗಿ ನೀರಿನ ನಳ ಬಳಕೆ ಮಾಡುತ್ತಿದ್ದಾರೆ ಎಂದು ನಾಗರೀಕರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ವಾರ್ಡಿನ ನಾಗರೀಕರು ಗುರುವಾರ  ಮೇಕಲಮರ್ಡಿ ಗ್ರಾಪಂ. ಭೇಟಿ ನೀಡಿ  ಮನವಿ ಸಲ್ಲಿಸಿದರು.

         ರೇಣುಕಾ ಪೂಜೇರಿ, ಸೋಮವ್ವ ಕಾದ್ರೋಳಿ, ಯಲ್ಲವ್ವ ಚೂಣಿ ಮಾತನಾಡಿ,  ಗ್ರಾಮದ ಬ್ರಹ್ಮದೇವರ ಓಣಿಯಲ್ಲಿರುವ ಕಳೆದ ಹಲವಾರು ತಿಂಗಳಿನಿಂದ ವಾರ್ಡಿನ ನಾಗರೀಕರು ನೀರಿನ ಟ್ಯಾಂಕ್ ಆಳವಡಿಸಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಇದಕ್ಕೆ  ಸ್ಪಂದಿಸಿದ ಗ್ರಾಪಂ.ಸದಸ್ಯನು   ನೀರಿನ ಟ್ಯಾಂಕ ಆಳವಡಿಕೆಗೆ ಮುಂದಾದಾಗ  ನಮ್ಮ ಮನೆಯ ಬಾಗಿಲ ಮುಂದೆ ಬೇಡ, ಟ್ಯಾಂಕ್ ನಿರ್ಮಿಸಿದರೆ ಮನೆಯ ಮುಂದೆ ಗಲಿಜು ಆಗುತ್ತದೆ ಎಂದು ತಕರಾರು ತೆಗೆದರ ಹಿನ್ನೆಲೆಯಲ್ಲಿ  ಗ್ರಾಮ ಪಂಚಾಯತ ಸದಸ್ಯ ಶಿವಪ್ಪ ಚೋಬಾರಿ  ತಮ್ಮ ಮನೆಯ ಮುಂದೆ ನಳ ಜೋಡನೇ ಮಾಡಿ ವಾರ್ಡಿನ ನಾಗರೀಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 

ವಿನಾಕಾರಣ  ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರನ್ನು ತೇಜೋವಧೆ ಮಾಡುತ್ತಿದ್ದಾರೆ.  ಇಂತವರ ಮಾತಿಗೆ ಜನತೆ ಕಿವಿಗೋಡದೆ  ವಾರ್ಡಿನ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. 

         ಕೆಲ ಪಟ್ಟಬದ್ದ ಹಿತಾಸಕ್ತಿಗಳು ವಾರ್ಡಿನ ನಾಗರೀಕರಲ್ಲಿ ನಿಮ್ಮ ಮನೆ ಬಾಗಿಲ ಮುಂದೆ ಉಚಿತ ನಲ್ಲಿ ಜೋಡಣೆ ಮಾಡಿ ಕೊಡುವುದಾಗಿ ನಂಬಿಸಿ ಅವರನ್ನು ಕರೆತಂದು ಗ್ರಾಪಂ.ಸದಸ್ಯನ ವಿರುದ್ದ ಇಲ್ಲಸಲ್ಲದ ಆರೋಪ ಮಾಡುವಂತೆ ಪುಸಲಾಯಿಸಿ ಅವರನ್ನು ಪ್ರತಿಭಟನೆ ಮಾಡುವಂತೆ ಮನವೊಲಿಸಿದ್ದಾರೆ. 

ಆ ಸುದ್ದಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಮೇಲೆ ಇದು ನಮಗೆ ಗೊತ್ತಿಲ್ಲ.  ನಮಗೆ  ಉಚಿತ ನಳ ಜೋಡಣೆ ಮಾಡಿ ಕೊಡುವುದಾಗಿ ನಂಬಿಸಿದ್ದಾರೆ. ಈ ಕುರಿತು ನಮಗೆ ಸತ್ಯ ಅರಿವಾದ ಮೇಲೆ ಗ್ರಾಪಂ.ತೆರಳಿ ಗ್ರಾಪಂ.ಸದಸ್ಯನ ಮನೆ ಬಾಗಿಲ ಮುಂಭಾಗದಲ್ಲಿ ನಲ್ಲಿಯಿಂದ ನಮಗೆ ನೀರು ಸಾಕಷ್ಟು ಪೂರೈಕೆಯಾಗುತ್ತಿದ್ದು ಇದರಿಂದ ನಮಗೆ ಯಾವುದೇ ತೊಂದರೆ ಆಗುತ್ತಿಲ್ಲ ಎಂದರು.

    ಗ್ರಾಪಂ.ಸದಸ್ಯ ಶಿವಪ್ಪ ಚೋಬಾರಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದು ನನ್ನ ಏಳ್ಗೆ ಸಹಿಸದ ಕೆಲವರು ವಾರ್ಡಿನ ಜನರಲ್ಲಿ ತಪ್ಪು ಕಲ್ಪನೆ  ಮೂಡಿಸಿ ನನ್ನ ತೇಜೊವಧೆಗೆ ಯತ್ನ ಮಾಡುತ್ತಿದ್ದಾರೆ ಎಂದರು.

  ಉಲ್ಲಾಸ ಚಚಡಿ, ಲಕ್ಷ್ಮೀ ಪೂಜೇರಿ, , ಲಕ್ಷ್ಮೀ ಚಚಡಿ, ತಿಪ್ಪಣ್ಣ ಚೋಬಾರಿ, ಈರವ್ವಾ ಚೋಬಾರಿ, ಅನ್ನಪೂರ್ಣಾ ಚೋಬಾರಿ, ಮಹೇಶ್ವರ ಚೋಬಾರಿ, ಆಶಾ ಚೋಬಾರಿ, ಗದಿಗ  ಯ್ಯ ಕರವಿನಕೊಪ್ಪ, ಸಂತೋಷ ಪೂಜೇರಿ, ಸೋಮವ್ವ ಕಾದ್ರೋಳಿ, ಮಲ್ಲವ್ವ ಚಚಡಿ, ಶಂಕರ ಕಬ್ಬೂರ, ರಾಮಪ್ಪ ಬಡಿಗೇರ, ಕವಿತಾ ಬಡಿಗೇರ, ಗೌರಮ್ಮ ಹುಗ್ಗಿ, ನಾಗಪ್ಪ ಬಡಿಗೇರ ಮುಂತಾದವರು ಇದ್ದರು.