ಲೋಕದರ್ಶನ ವರದಿ
ರಾಮದುರ್ಗ 01: ಕೃಷಿ ಉತ್ಪನ್ನ ಮಾರುಕಟ್ಟ ಸಮಿತಿಯ ಮೂರನೇ ಅವಧಿಗೆ ಅಧ್ಯಕ್ಷರಾಗಿ ದ್ಯಾವಪ್ಪ ಬೆಳವಡಿ ಮತ್ತು ಉಪಾಧ್ಯಕ್ಷರಾಗಿ ಪ್ರಕಾಶ ಬರದೇಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ದ್ಯಾವಪ್ಪ ಬೆಳವಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಬರದೇಲಿ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿವರ್ಾಹಿಸಿದ ತಹಶೀಲ್ದಾರ ಗೀರಿಶ ಸ್ವಾದಿ ತಿಳಿಸಿದರು. ಅಧ್ಯಕ್ಷರಾಗಿ ಚುನಾಯಿತಗೊಂಡ ದ್ಯಾಮಪ್ಪ ಬೆಳವಡಿ ಮಾತನಾಡುತ್ತಾ ಶಾಸಕ ಮಹಾದೇವಪ್ಪ ಯಾದವಾಡರ ಮಾರ್ಗದರ್ಶನ ಹಾಗೂ ಎಲ್ಲ ಸದಸ್ಯರರನ್ನು ವಿಶ್ವಾಸಕ್ಕೆ ತಗೆದುಕೊಂಡು ಎಪಿಎಮ್ಸಿಯ ಅಭಿವೃದ್ದಿ ಮತ್ತು ರೈತರ ಏಳಿಗೆಗೆ ಶ್ರಮಿಸುತ್ತೆನೆ ಎಂದು ನುಡಿದರು. ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ತಾಲೂಕಿನ ಎಲ್ಲ ಜನಪ್ರತಿನಿಧಿಗಳೂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದಿಸಿದರು.