ಅವಿರೋಧವಾಗಿ ಮುನವಳ್ಳಿ ಆಯ್ಕೆ

ಲೋಕದರ್ಶನ ವರದಿ

ಗೋಕಾಕ 18: ವೀರಶೈವ ಲಿಂಗಾಯತ ಸೇವಾ ವಿಕಾಸ ವೇದಿಕೆ ಗೋಕಾಕ್ ಇದರ ಸಂಯುಕ್ತ ಆಶ್ರಯದಲ್ಲಿ ಪ್ರತಿಷ್ಠಿತ  ಕೆಎಲ್ಇ ಸಂಸ್ಥೆಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯದ  ಜಯಾನಂದ ಮುನವಳ್ಳಿ ಅವರಿಗೆ ವೀರಶೈವ ಲಿಂಗಾಯತ ಸೇವಾ ವಿಕಾಸ  ವೇದಿಕೆಯಿಂದ ಸತ್ಕಾರ ಮಾಡಲಾಯಿತು.

  ಈ ಅಭಿನಂದನಾ ಸಮಾರಂಭವನ್ನು ಸೋಮವಾರ ಪೇಟೆಯ ಶ್ರೀ ಮುಪ್ಪಯ್ಯನ  ಮಠದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿಗಳಾದ ಶ್ರೀ ಪರಮಪೂಜ್ಯ ಮುರುಘರಾಜೇಂದ್ರ ಸ್ವಾಮೀಜಿಗಳು ವಹಿಸಿದ್ದರು. 

  ನೇತೃತ್ವವನ್ನು ಮುಪ್ಪಯನ ಮಠದ ಪೂಜ್ಯರಾದ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣ್ಯ ವ್ಯಾಪಾರಸ್ಥರಾದ   ವಿಕ್ರಮ್ ಅಂಗಡಿ ಅವರು ವಹಿಸಿಕೊಂಡಿದ್ದರು ಮತ್ತು ಅತಿಥಿಯಾಗಿ ಅರ್ಬನ್ ಬ್ಯಾಂಕಿನ ಅಧ್ಯಕ್ಷರಾದ   ಬಸವರಾಜ್ ಕಲ್ಯಾಣ್ ಶೆಟ್ಟಿ. ಅಶೋಕ್ ಕೊಳವಿ. ರಾಜು ಶೆಟ್ಟರ್, ಬಸವರಾಜ್    ಗೊಡಚಿನಮಲ್ಕಿ. ಮತ್ತು ವಿಜಯ್ ಶಾಸ್ತ್ರಿಗಳು, ವೇದಿಕೆ ಮೇಲೆ ಆಸೀನರಾಗಿದ್ದರು.

ಈ ಕಾರ್ಯಕ್ರಮದಲ್ಲಿ ಸೇವಾ ವಿಕಾಸ ವೇದಿಕೆಯ ಸದಸ್ಯರಾದ ಪ್ರಶಾಂತ್ ಕುರಬೆಟ್, ಸೋಮನಾಥ್ ಮುಗದುಮ. ಮಲ್ಲಿಕಾರ್ಜುನ  ಮಹಾಜನ್  ಪ್ರದೀಪ್ ಕಲ್ಯಾಣ್ ಶೆಟ್ಟಿ, ಪ್ರವೀಣ್ ಚುನಮರಿ, ರವಿ ಕಲಬುರ್ಗಿ, ರಾಜಶೇಖರ್ ಬಿಳ್ಳೂರು, ಪ್ರಮೋದ್ ಕುರಬೆಟ್ ಮಲ್ಲಿಕಾರ್ಜುನ್ ಹಸಬಿ ಮತ್ತು ಇನ್ನೂ ಅನೇಕ ಜನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.   ಆದರ್ಶ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ  ಎಸ್.ಕೆ. ಮಠದ   ನಿರೂಪಿಸಿ  ವಂದಿಸಿದರು.