ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ರಾಣೇಬೆನ್ನೂರು-ಫೆ19: ತಾಲೂಕಿನ ಅಸುಂಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ 12 ನಿರ್ದೇಶಕರ ಚುನಾವಣೆ ಪ್ರಕ್ರಿಯೆ ನಡೆದು ಅವಿರೋಧ ಆಯ್ಕೆ ಘೋಷಣೆಯಾಗಿತ್ತು.  ಇಂದು ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದು ಈಶ್ವರ ಹೊನ್ನಪ್ಪ ಹವಳನಾಯಕ ಅಧ್ಯಕ್ಷರಾಗಿ ಮತ್ತು ಕಾಂತೇಶ ಹನುಮಂತಪ್ಪ ಹಿತ್ತಲಮನಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.

ಇನ್ನುಳಿದಂತೆ ನಿರ್ದೇಶಕರಾಗಿ ಎಂ.ಎಸ್.ಕುಸಗೂರ, ಎಚ್.ಎಸ್.ಸಿದ್ದಪ್ಪನವರ, ಬಿ.ಪಿ.ದೊಡ್ಡಬೂದಿಹಾಳ, ಡಿ.ಎಸ್.ನಿರ್ಮನಿ, ಎ.ಎಂ.ಕೊಕ್ಕರಗೊಂದಿ, ಇ.ಆರ್.ಬಳಿಗಾರ, ಕೆ.ಎನ್.ಕೆಂಚಮ್ಮನವರ, ಎಚ್.ಬಿ.ಬೆಳವಿಗಿ, ವೀಣಾ ಎಂ. ಕುಬಸದ, ಗಿರಿಜವ್ವ ಕೆ. ಮೂಲಿಮನಿ ಆಯ್ಕೆಗೊಂಡವರಾಗಿದ್ದಾರೆ.  ನೂತನ ಪದಾಧಿಕಾರಿಗಳು ಗ್ರಾಮದ ಮುಖಂಡರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗಣ್ಯರು ಅಭಿನಂದಿಸಿ ಸನ್ಮಾನಿಸಿದರು. 

ಚುನಾವಣಾಧಿಕಾರಿಯಾಗಿ ವ್ಹಿ.ಜಿ.ಕುಲಕಣರ್ಿ ಅವರು ಕಾರ್ಯನಿರ್ವಹಿಸಿದರು.  ಬ್ಯಾಂಕ್ ಪ್ರತಿನಿಧಿ ಆರ್.ಜಿ.ಮಾಳಗುಡ್ಡಪ್ಪನವರ ಅವರು ಪಾಲ್ಗೊಂಡಿದ್ದರು.