ಲೋಕದರ್ಶನ ವರದಿ
ಗೋಕಾಕ 17: ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಕಾಮರ್ಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಕೆಎಮ್ಎಫ್ ನಿದರ್ೇಶಕ ಅಮರನಾಥ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಮಂಗಳವಾರದಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಉಪ್ಪಾರಟ್ಟಿ ಇದರ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಜರುಗಿದೆ.
ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಸಿದ್ದಪ್ಪ ಆಡಿನ, ಉಪಾಧ್ಯಕ್ಷರಾಗಿ ರುದ್ರಪ್ಪಾ ಬಾಳಪ್ಪಾ ವ್ಯಾಪಾರಕಿ ಅವಿರೋಧವಾಗಿ ಆಯ್ಕೆಯಾದರು. ಆಯ್ಕೆಯ ನಂತರ ಕಾಮರ್ಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಕೆಎಮ್ಎಫ್ ನಿದರ್ೇಶಕ ಅಮರನಾಥ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸತ್ಕರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹನಮಂತ ದುರ್ಗನ್ನವರ, ಹನಮಂತ ಖಿಚಡಿ, ಕರೇಪ್ಪಾ ಕೊಳವಿ, ಮಹಾದೇವ ಚುನನ್ನವರ, ಬಾಳಯ್ಯ ಅಜ್ಜನವರ, ಲಕ್ಕಪ್ಪಾ ಕಡಕೋಳ, ಸಿದ್ದಪ್ಪಾ ಆಡಿನ, ಬಸಪ್ಪಾ ವ್ಯಾಪಾರಕಿ, ರಾಮಸಿದ್ಧ ಮಜ್ಜಗಿ, ಕಲ್ಲಪ್ಪಾ ಗೂದಿಗೊಪ್ಪ, ಅಡಿವೆಪ್ಪ ಚಿಗದನ್ನವರ, ಸಿದ್ರಾಮ ಕಪರಟ್ಟಿ, ಮಹಾದೇವ ಬಂಡಿ, ಚನ್ನಪ್ಪ ಮತ್ತಿಕೊಪ್ಪ, ಚನ್ನಮಲ್ಲಪ್ಪ ತಿಗಡಿ, ಶೆಟ್ಟೆಪ್ಪ ಭಾಗೋಜಿ, ವಿಠ್ಠಲ ನಂದಿ, ತಿಪ್ಪಣ್ಣ ಕಡಕೋಳ, ಬಸಪ್ಪಾ ಹೊನಕುಪ್ಪಿ, ಬಸಪ್ಪ ಮೆಳವಂಕಿ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿದರ್ೇಶಕರು ಹಾಗೂ ಉಪ್ಪಾರಟ್ಟಿ ಗ್ರಾಮದ ಹಿರಿಯರು ಇತರರು ಇದ್ದರು.