ಲೋಕದರ್ಶನವರದಿ
ಹಾವೇರಿ : ಕನರ್ಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ಇದರ ಕಾರ್ಯಕಾರಿಸಮಿತಿ ಸದಸ್ಯರ ಚುನಾವಣೆಗೆ ಹಾವೇರಿ ಜಿಲ್ಲೆಯಿಂದ ಅವಿರೋಧ ಆಯ್ಕೆ ಮಾಡುವ ಕನಕ ಗುರುಪೀಠ ಹೊಸಶಕೆ ಆರಂಭಿಸಿ ಸಮುದಾಯದಲ್ಲಿ ಭರವಸೆ ಮೂಡಿಸಿದೆ.
ಕೇವಲ ಮೂರು ಸದಸ್ಯರ ಆಯ್ಕೆಗೆ ಹತ್ತು ಸ್ಪಧರ್ಿಗಳು ಅಜರ್ಿ ಸಲ್ಲಿಸಿ ಚುನಾವಣಾ ಅಖಾಡದಲ್ಲಿದ್ದರು. ಈ ಬಗ್ಗೆ ಕನಕ ಗುರುಪೀಠ ಬೆಳ್ಳೊಡಿ ಶಾಲಾಮಠದಲ್ಲಿ ನಡೆದ ಮುಖಂಡರು ಹಾಗೂ ಸ್ಪಧರ್ಾಳುಗಳ ಸಭೆಯಲ್ಲಿ ಅನೇಕ ವಿಷಯಗಳು ಚಚರ್ೆ ಯಾದವು.ಶ್ರೀ ಕಾಗಿನೆಲೆ ಕನಕ ಗುರುಪೀಠವು ಮತ್ತು ಸಮಾಜದ ಮುಖಂಡರು ಎಲ್ಲರ ಜೊತೆ ಕೂಲಂಕಷವಾಗಿ ಚಚರ್ಿಸಿದ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಏಳು ಸ್ಪಧರ್ಿಗಳನ್ನು ಸಮಾಜದ ಇನ್ನಿತರ ಕಾರ್ಯ ಚಟುವಟಿಕೆಗಳ ಜವಾಬ್ದಾರಿ ನಿರ್ವಹಿಸಲು ಸಲಹೆ ನೀಡಿದರು. ಈ ವೇಳೆ ಎಲ್ಲರೂ ಶ್ರೀ ಮಠದ ಆದೇಶವನ್ನು ಆಶೀವರ್ಾದವೆಂದು ತಿಳಿದು ಅವಿರೋಧ ಆಯ್ಕೆಗೆ ಸಹಕರಿಸಿದರು. ಈ ದೆಸೆಯಿಂದಾಗಿ ಶ್ರೀ ಕನಕ ಗುರುಪೀಠ ಅವರನ್ನು ಅಭಿನಂದಿಸುವ ಮೂಲಕ ಹೊಸ ಶಕೆ ಆರಂಭಿಸಿದೆ.ಈ ವೇಳೆ ಮಾತನಾಡಿದ ಶ್ರೀಗಳು, ಚುನಾವಣೆಯಲ್ಲಿ ಮಾಡುವ ಸ್ಪಧರ್ೆ ಸಮಾಜದ ಸಾಮರಸ್ಯಕ್ಕೆ ಮಾರಕ ಅಲ್ಲದೆ ದುಂದುವೆಚ್ಚ, ಮತ್ತು ಎಲ್ಲಾ ರೀತಿ ಯಿಂದ ಸೂಕ್ತವಲ್ಲ ಎಂದರು.
ಈ ವೇಳೆ ಮಾಜಿ ಸಚಿವ ಶಂಕರ್, ಹರಿಹರ ಶಾಸಕ ರಾಮಪ್ಪ, ಶಂಕರಣ್ಣ ಮಾತನವರ್, ರಾಜೇಂದ್ರ ಹಾವೇರಣ್ಣನವರ್, ಮಂಜಣ್ಣ ನಾಗೇನಹಳ್ಳಿ, ರವಿ ದಂಡೀನ್,ಮಾರುತಿ ಹರಿಹರ.ನಾಗರಾಜ ದಿಳ್ಳೆಪ್ಪನವರ.ಮಾಲತೇಶ ಸಾಲಿ ಹಾಗೂ ಅನೇಕ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.