ಉಮ್ರಾ ಯಾತ್ರೆ: ವ್ಯಕ್ತಿಗೆ ಹಿಂದು ಮುಸ್ಲಿಂರಿಂದ ಭಾವೈಕ್ಯತೆಯ ಪುಷ್ಪ ಸಮರೆ​‍್ಣ

Umrah pilgrimage: A person receives a floral tribute of solidarity from Hindus and Muslims

ಲೋಕದರ್ಶನ ವರದಿ 

ಉಮ್ರಾ ಯಾತ್ರೆ: ವ್ಯಕ್ತಿಗೆ ಹಿಂದು ಮುಸ್ಲಿಂರಿಂದ ಭಾವೈಕ್ಯತೆಯ ಪುಷ್ಪ ಸಮರೆ​‍್ಣ 

ಮಹಾಲಿಂಗಪುರ 03:  ಎಪ್ರಿಲ್ 4 ರಂದು ಮುಸ್ಲಿಂರ ಪವಿತ್ರ ಮಕ್ಕಾ-ಮದೀನಾ ಸ್ಥಳದ ಉಮ್ರಾ ಯಾತ್ರೆ ಕೈಗೊಂಡಿರುವ ಪಟ್ಟಣದ ಉಸ್ಮಾನಿಯಾ ಮಸ್ಜಿದ್ ಪೇಶ್ ಇಮಾಮ್ ಹಾಪೀಜ್ ಯುಸೂಫ್ ಸಾಹಬ ಅನ್ವರ್ ನದಾಫ್ ಅವರನ್ನು ಮುಸ್ಲಿಂ ಮತ್ತು ಹಿಂದೂ ಬಾಂಧವರು ಸೇರಿ ಪುಷ್ಪ ಸಮರೆ​‍್ಣ ನಡೆಸಿ ಭಾವೈಕ್ಯತೆ ಮೆರೆದರು. 

ಜೊತೆಯಲ್ಲಿ ತಾಯಿ ಸಖೀನಾ ಅವರೂ ಸಹ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಈ ಸಂದರ್ಭದಲ್ಲಿ ಅವರಿಗೂ ಶ್ರೀಮತಿ ಶಬಾನಾ ಮತ್ತು ಸನಾ ಬೀಳಗಿ ಅವರಿಂದ ಪುಷ್ಪ ಸಮರೆ​‍್ಣ ನಡೆಯಿತು. ಇದು ಇಪ್ಪತ್ತು ದಿನಗಳ ಯಾತ್ರೆ .ಈ ಮಧ್ಯೆದಲ್ಲಿ ಕುರಾನ್ ಮತ್ತು ಹದೀಸ್ (ವಚನ) ಗಳಲ್ಲಿ ಉಲ್ಲೇಖ ಸ್ಥಳಗಳಿಗೆ ತೆರಳಿ ಅಲ್ಲಿ ಪ್ರಾರ್ಥನೆ ಮತ್ತು ದುವಾ ಮಾಡುವರು.ಹಾಫಿಜ್ ಯುಸೂಫ್ ಅವರಿಗೆ ಕಡು ಬಡತನ, ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಕೊರಗು ಎಲ್ಲವನ್ನೂ ಮೀರಿ ತಾಯಿಯ ಮಾರ್ಗದರ್ಶನದಲ್ಲಿ ಬದುಕು ಸಾಗಿಸಿ ಅಷ್ಟೋ ಇಷ್ಟೋ ಹಣ ಸೇರಿಸಿ ಕಂಡ ಕನಸು ಉಮ್ರಾ ಯಾತ್ರೆ ಕೈಗೊಂಡಿದ್ದಾರೆ. 

ಈ ಯಾತ್ರೆಗೆ ಪುರಸಭೆ ಸದಸ್ಯ ಮತ್ತು ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ, ಮೇದಾರ ಸಮಾಜದ ಜಿಲ್ಲಾ ಉಪಾಧ್ಯಕ್ಷ ಗಂಗಪ್ಪ ಮೇದಾರ, ಮಹಾಲಿಂಗಪುರ ಘಟಕದ ಹಣ್ಮಂತ ಮೇದಾರ, ಶಿಕ್ಷಕ ಹಣ್ಮಂತ ಬ್ಯಾಕೋಡ್, ಪತ್ರಕರ್ತರಾದ ಜಯರಾಂಶೆಟ್ಟಿ, ಎಸ್ ಎಸ್‌. ಈಶ್ವರ​‍್ಪಗೋಳ, ಮಹೇಶ್ ಆರಿ, ಚಂದ್ರಶೇಖರ ಮೋರೆ, ಲಕ್ಷ್ಮಣ ಕಿಶೋರಿ, ಮೀರಾ ಎಲ್‌. ತಟಗಾರ, ಶುರೈಮ್ ಸದ್ದಾಂ ಜಮಾದಾರ, ಬಂದೇನವಾಜ ಸಿಂದಗಿ, ಸಿರಾಜ್ ಬೀಳಗಿ, ವೇಮನ್ ಶ್ರೀಶೈಲ ಜಮಖಂಡಿ, ಮೋಪಗಾರ, ಶ್ರೀಶೈಲ ಗುಡೇಜಾಡರ್, ಬಬ್ಲು ಮುಲ್ಲಾ ಇನ್ನೂ ಮುಂತಾದವರಿದ್ದರು.