ಕಾಗವಾಡ 10: ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಜುಗೂಳ ಗ್ರಾ.ಪಂ. ಸದಸ್ಯ ಉಮೇಶ ಪಾಟೀಲ ಇವರು 3127 ಮತಗಳನ್ನು ಪಡೆದು, ಚುನಾಯಿತಗೊಂಡಿದ್ದಾರೆ.
ಇತ್ತಿಚಿಗೆ ಯೂತ್ ಕಾಂಗ್ರೆಸ್ ಪಕ್ಷದ ಬ್ಲಾಕ ಮಟ್ಟದ ಚುನಾವಣೆ ಜರುಗಿತು. ಅದರಲ್ಲಿ ಕಾಗವಾಡ ಮತಕ್ಷೇತ್ರದ 52 ಗ್ರಾಮಗಳಲ್ಲಿ 5250 ಜನ, 35 ವಯಸ್ಸಿನ ಒಳಗಿನ ಯುವ ಮತದಾರರು ಮತ ಚಲಾಯಿಸಿದರು. ಇದರಲ್ಲಿ 3127 ಮತ ಉಮೇಶ ಪಾಟೀಲ ಪಡೆದುಕೊಂಡಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಿಂತ 1801 ಅಧಿಕ ಮತಗಳು ಪಡೆದುಕೊಂಡು ಚುನಾಯಿತರಾಗಿದ್ದಾರೆ.
ಉಮೇಶ ಪಾಟೀಲ ಮಾತನಾಡಿ, ಪಕ್ಷದ ಜಿಲ್ಲಾ ನಾಯಕರು ಹಾಗೂ ಯುವ ಕಾಂಗ್ರೆಸ್ ಕಾರ್ಯದರ್ಶಿಯಾದ ರಾಹುಲ ಜಾರಕಿಹೊಳಿ ಮತ್ತು ಮೃನಾಲ ಹೆಬ್ಬಾಳಕರ ಅವರ ಮಾರ್ಗದರ್ಶನದಲ್ಲಿ ಜೊತೆಗೆ ನೂತನವಾಗಿ ಆಗ್ಕೆಗೊಂಡಿರುವ ಅನಂತಪೂರ ಬ್ಲಾಕ್ ಅಧ್ಯಕ್ಷ ಆಕಾಶ ನಂದಗಾಂವ, ಕಾಗವಾಡ ಬ್ಲಾಕ್ ಅಧ್ಯಕ್ಷ ಸುದರ್ಶನ ಜೆಂತೆನ್ನವರ ಜೊತೆಗೆ ಸೇರಿ ಪಕ್ಷ ಸಂಘಟಿಸಿ,ಮುಂಬರುವ ತಾ.ಪಂ., ಜಿ.ಪಂ. ಮತ್ತು ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ, ಕಾಂಗ್ರೇಶ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.