ದತ್ತಕ ಶಾಲೆಗೆ ಸ್ವಯಂ ಚಾಲಿತ ಬೆಲ್ ದೇಣಿಗೆ ನೀಡಿದ ಉಮಾ ತಂಬ್ರಳ್ಳಿ
ಕೊಪ್ಪಳ 21: ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ದತ್ತು ಪಡೆದ ನಗರದ ಜಿಪಿಎಚ್‌ಎಸ್ ಶಾಲೆಗೆ 10000 ರೂಪಾಯಿ ಬೆಲೆ ಬಾಳುವ ಸ್ವಯಂ ಚಾಲಿತ ಆಟೋಮ್ಯಾಟಿಕ್ ಬೆಲ್ ನ್ನು ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಯವರು ದೇಣಿಗೆಯಾಗಿ ನೀಡಿದರು.
ಸದ್ರಿ ಬೆಲ್ಲು ಆಟೋಮ್ಯಾಟಿಕ್ ಆಗಿ ತಂದತಾನೇ ನಿಗದಿಗೊಳಿಸಿದ ಸಮಯಕ್ಕೆ ಸರಿಯಾಗಿ ಬೆಲ್ ಬಾರಿಸುವುದರ ಮೂಲಕ ಸಮಯದ ಬಗ್ಗೆ ಜಾಗೃತಿ ಮೂಡಿಸುತ್ತದೆ ,ಸದರಿ ಬೆಲ್ಲನ್ನು ಉಮಾ ತಂಬ್ರಳ್ಳಿ ರವರ ಪರವಾಗಿ ಇನ್ನರ್ ವೀಲ್ ಕ್ಲಬ್ಬಿನ ಜಿಲ್ಲಾ ಚೇರ್ಮೆನ್ ಸುಷ್ಮಾ ಪತಂಗೆ ರವರು ವಿತರಣೆ ಮಾಡುವುದರ ಮೂಲಕ ಇದಕ್ಕೆ ಚಾಲನೆ ನೀಡಿ ಶಾಲೆಗೆ ಹಸ್ತಾಂತರಿಸಿದರು, ನಂತರ ಮಾತನಾಡಿ ಸುಧಾರಿತ ವ್ಯವಸ್ಥೆಯು ಸಮಯಪ್ರಜ್ಞೆ, ವರ್ಗ ಪರಿವರ್ತನೆಗಳನ್ನು ಖಾತ್ರಿ ಗೊಳಿಸುತ್ತದೆ, ಶಿಸ್ತು ಮತ್ತು ರಚನಾತ್ಮಕ ಕಲಿಕೆಯ ವಾತಾವರಣವನ್ನು ಬೆಳೆಸುತ್ತದೆ, ಈ ಉಪಕ್ರಮವನ್ನು ಶಾಲೆಯ ಶಿಕ್ಷಕ ವರ್ಗಕ್ಕೆ ಮತ್ತು ವಿದ್ಯಾರ್ಥಿ ವರ್ಗಕ್ಕೆ ತುಂಬಾ ಅನುಕೂಲ ವಾಗಲಿದೆ ಇಂಥ ವ್ಯವಸ್ಥೆ ಶಾಲೆಗೆ ದೊರಕಿಸಿಕೊಟ್ಟ ಉಮಾ ತಂಬ್ರಳ್ಳಿ ಅವರ ಕಾರ್ಯ ಮೆಚ್ಚುವಂತಾಗಿದೆ ಎಂದು ಜಿಲ್ಲಾ ಚೇರ್ಮೆನ್ ಸುಷ್ಮಾ ಪತಂಗೆ ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ, ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಉಪಾಧ್ಯಕ್ಷರಾದ ಮಧು ಶೆಟ್ಟರ್, ಖಜಾಂಚಿ ಆಶಾ ಕವಲೂರು ,ಐ ಎಸ್ ಓ ಮಧು ನಿಲೋಗಲ್, ಎಡಿಟರ್ ನಾಗವೇಣಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ರಾಧಾ ಕುಲಕರ್ಣಿ ಹಾಗೂ ಸುಜಾತ ಪಟ್ಟಣಶೆಟ್ಟಿ ಸೇರಿದಂತೆ ಶಾಲೆಯ ಶಿಕ್ಷಕರು ಇತರರ ಸದಸ್ಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.