ಉಮಾ ಮಹೇಶ್ ತಂಬ್ರಳ್ಳಿ ಗೆ ಮಯೂರ ಆದರ್ಶ ದಂಪತಿ ರಾಷ್ಟ್ರ ಪ್ರಶಸ್ತಿ ಪ್ರಧಾನ

Uma Mahesh Tambralli receives the Mayura Ideal Couple National Award

ಕೊಪ್ಪಳ 11 : ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿರುವ ಉಮಾ ಮಹೇಶ್ ತಂಬ್ರಳ್ಳಿ ರವರಿಗೆ ಅವರ ಉತ್ತಮ ಜನ ಸಾಮಾನ್ಯ ಸಮಾಜ ಸೇವೆಗಾಗಿ ರಾಷ್ಟ್ರಮಟ್ಟದ ಮಯೂರ್ ಆದರ್ಶ ದಂಪತಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು,ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಆವರಣದಲ್ಲಿರುವ ನಯನ ರಂಗ ಮಂದಿರ ಸಭಾಂಗಣದಲ್ಲಿ ಸುರುವೇ ಕಲ್ಚರಲ್ ಅಕಾಡೆಮಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಏರಿ​‍್ಡಸಿದ ವಿವಿಧ ಸಾಧಕರಿಗೆ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಕೊಪ್ಪಳದ ತಂಬ್ರಳ್ಳಿ ಕುಟುಂಬದ   ಉಮಾ ಮತ್ತು ಅವರ ಪತಿ ಮಹೇಶ್ ತಂಬ್ರಳ್ಳಿ ರವರಿಗೆ ಅವರ ಉತ್ತಮ ಸಮಾಜ ಸೇವೆ ಗಾಗಿ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವರಾದ ಡಾ, ಲೀಲಾದೇವಿ ಆರ್, ಪ್ರಸಾದ್ ರವರು ಪ್ರಧಾನ ಮಾಡಿ ಸತ್ಕರಿಸಿದರು,  

ಈ ಸಂದರ್ಭದಲ್ಲಿ ಸಿನಿಮಾ ನಟರಾದ ಮೀನಾ, ಶಂಕರ್ ಭಟ್ ಮತ್ತು ಎಂಜಿಆರ್ ಅರಸ್ ಅಲ್ಲದೆ ಸಾಹಿತಿ ಡಾ. ರಾಜೇಂದ್ರ ಗಡದ್ ಹಾಗೂ   ನಳಿನಿ ,ಕಾರ್ಯಕ್ರಮ ಸಂಘಟಕ ರಮೇಶ್ ಸುರುವೇ ಪಾಲ್ಗೊಂಡಿದ್ದು ಡಾ. ಕಲ್ಮೇಶ್ವರ ಸ್ವಾಮಿ ಬೆಳಗಾವಿ ರವರು ಸಮಾರಂಭದ ಸಾನಿಧ್ಯ ವಹಿಸಿದ್ದರು.ಉಮಾ ಮಹೇಶ್ ತಂಬ್ರಳ್ಳಿ ರವರಿಗೆ ಅವರ ಉತ್ತಮ ಸೇವೆಗಾಗಿ ರಾಷ್ಟ್ರಮಟ್ಟದ ಮಯೂರ ಆದರ್ಶ ದಂಪತಿ ಪ್ರಶಸ್ತಿ ಲಭಿಸಿರುವುದಕ್ಕೆ ಕೊಪ್ಪಳದ ವಿವಿಧ ಮಹಿಳಾ ಸಂಘಟನೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.