ಉಡುಪಿ: ಫೆಬ್ರವರಿ 1ರಿಂದ ಮಲ್ಪೆ ಬೀಚ್ ಉತ್ಸವ ಆರಂಭ Udupi: The Malpe Beach Festival begins on February 1st
Lokadrshan Daily
1/6/25, 4:03 AM ಪ್ರಕಟಿಸಲಾಗಿದೆ
ಉಡುಪಿ ೦೭: ಬೀಚ್ ಉತ್ಸವ ಬರುವ ಫೆಬ್ರವರಿ 1 ಹಾಗೂ 2 ರಂದು ನಡೆಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಂಗಳವಾರ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 29 ರಿಂದ 31ರ ನಡುವೆ ನಡೆಯಬೇಕಿದ್ದ ಉತ್ಸವವನ್ನು ಅನಿರ್ವಾಯ ಕಾರಣಗಳಿಂದ ಮುಂದೂಡಲಾಗಿತ್ತು. ಉತ್ಸವದ ಅಂಗವಾಗಿ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾಪು ಲೈಟ್ ಹೌಸ್ ಉತ್ಸವದ ದಿನಾಂಕವನ್ನು ಜಿಲ್ಲಾಡಳಿತ ಇನ್ನೂ ಆಖೈರು ಗೊಳಿಸಬೇಕಿದೆ ಎಂದು ಹೇಳಿದರು
ಮಲ್ಪೆ ಬೀಚ್ ಉತ್ಸವದಲ್ಲಿ ದೋಣಿ ಸ್ಪರ್ಧೆ, ಗಾಳಿಪಟ ಉತ್ಸವ, ಬೀಚ್ ಯೋಗಾಸನ, ಆಹಾರ ಉತ್ಸವ, ದ್ರಾಕ್ಷ ರಸ ಉತ್ಸವ, ಬೀದಿ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಉತ್ಸವದಲ್ಲಿ ಕಲಾ ಶಿಬಿರ, ಕರಕುಶಲ ಮೇಳ ಹಾಗೂ ಸರ್ಫಿಂಗ್, ಬೀಚ್ ಮ್ಯಾರಾಥಾನ್ ಸೇರಿದಂತೆ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.