ಕೆಂಪು ವಲಯದಲ್ಲಿ ಮದ್ಯ ಮಾರಾಟಕ್ಕೆ ಉದ್ಧವ್ ಠಾಕ್ರೆ ಸರ್ಕಾರ ಅನುಮತಿ

ಮುಂಬೈ,  ಮೇ  ೩,  ದೇಶಾದ್ಯಂತ  ಲಾಕ್  ಡೌನ್  ಸಡಿಲಗೊಳಿಸಿರುವ  ಕೇಂದ್ರ  ಸರ್ಕಾರ..  ಅಗತ್ಯ ವಸ್ತುಗಳ ಜತೆಗೆ ಇನ್ನಿತರ ಚಟುವಟಿಕೆಗಳಿಗೆ  ಅನುಮತಿ  ನೀಡಿದೆ. ಆದರೆ,  ಮೂರು ವಲಯಗಳನ್ನು  ವಿಭಜಿಸಿ  ..  ವಲಯವಾರು  ಅನುಮತಿಗಳನ್ನು  ಕಲ್ಪಿಸಿದೆ. ಹಸಿರು ಮತ್ತು ಕಿತ್ತಳೆ ವಲಯದಲ್ಲಿ  ಸಡಿಲಿಕೆ  ಅನ್ವಯವಾದರೂ,  ಕೆಂಪು ವಲಯದಲ್ಲಿ  ಮಾತ್ರ  ಪೂರ್ಣ  ಪ್ರಮಾಣದ  ಲಾಕ್‌ಡೌನ್  ಮುಂದುವರಿಯಲಿದೆ ಎಂದು ಹೇಳಿದೆ.ಆದರೆ,   ಮಹಾರಾಷ್ಟ್ರ  ರಾಜ್ಯ  ಸರ್ಕಾರ    ಕೆಂಪು ವಲಯದಲ್ಲಿ   ಕೆಲವು  ಚಟುವಟಿಕೆಗೆ  ಅನುಮತಿ ನೀಡಿದೆ. ಆದರೆ,  ಇದರಲ್ಲಿ ಮದ್ಯದಂಗಡಿಗಳಿಗೂ  ಪರವಾನಗಿ ನೀಡಿರುವುದು   ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅತ್ಯಗತ್ಯ  ಸೇವೆಗಳಿಗೆ   ಉದ್ಧವ್ ಠಾಕ್ರೆ   ಸರ್ಕಾರ  ಅನುಮತಿ  ನೀಡಿದ್ದು,   ಇದರಲ್ಲಿ   ಮದ್ಯ ಮಾರಾಟವೂ ಒಂದಾಗಿದೆ   ಇನ್ನೂ...  ಅಗತ್ಯ ಸೇವೆ   ಮಳಿಗೆಗಳ  ವಿಷಯದಲ್ಲಿ ಯಾವುದೇ  ನಿಬಂಧನೆ  ವಿಧಿಸದ   ಸರ್ಕಾರ,   ಅಗತ್ಯವಲ್ಲದ ಸೇವೆಗಳ    ವಿಷಯಗಳಲ್ಲಿ    ಒಂದು  ವಾಕ್ಯದಲ್ಲಿ  ಐದು  ಅಂಗಡಿ   ತೆರೆಯಲು  ಅನುಮತಿ  ನೀಡಿದೆ,  ಉದ್ಧವ್ ಸರ್ಕಾರದ ನಿರ್ಧಾರ    ಸಾಮಾಜಿಕ ಮಾಧ್ಯಮ ಗಳಲ್ಲಿ  ತೀವ್ರ   ಆಕ್ರೋಶ ವ್ಯಕ್ತವಾಗಿದ್ದು,   ಸರ್ಕಾರ  ನಿಲುವು   ಹುಡುಗಾಟದ ನಿರ್ಧಾರದಂತಿದೆ  ಎಂದು ಟೀಕಿಸಲಾಗಿದೆ. ದೇಶದಲ್ಲಿಯೇ   ಅತಿಹೆಚ್ಚಿನ   ಕೊರೊನಾ    ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ.   ಇಂತಹ ಸನ್ನಿವೇಶದಲ್ಲಿ   ಮದ್ಯದಂಗಡಿ ತೆರೆಯಲು ಅನುಮತಿ  ನೀಡಿ ಏನು ? ಮಾಡಲು  ಮುಂದಾಗಿದೆ. ಎಂದು ಪ್ರಶ್ನಿಸುತ್ತಿದ್ದಾರೆ.  ಸರ್ಕಾರಕ್ಕೆ ಆದಾಯದ ಮೇಲಿರುವ  ಶ್ರದ್ಧೆ  ಜನರ ಆರೋಗ್ಯದ ಮೇಲೆ  ಇಲ್ಲ ಎಂದು  ಕೆಲವರು ಪ್ರತಿಕ್ರಿಯಿಸಿದ್ದಾರೆ.