ಉದಾಸಿ ಗೆಲುವು: ಬಿಜೆಪಿ ವಿಜಯೋತ್ಸವ

ಲೋಕದರ್ಶನ ವರದಿ

ರಾಣೇಬೆನ್ನೂರು23: ಹಾವೇರಿ ಲೋಕಸಭಾ ಕ್ಷೇತ್ರ ಅಭ್ಯಥರ್ಿ ಶಿವಕುಮಾರ ಉದಾಸಿ ಮತ್ತು ರಾಜ್ಯದಲ್ಲಿ 25 ಸ್ಥಾನ ಗೆದ್ದಿರುವ ಬಿಜೆಪಿ ಹಾಗೂ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸಕರ್ಾರ ಬರುವುದನ್ನು ಸ್ವಾಗತಿಸಿ ನಗರ ಹಾಗೂ ತಾಲೂಕಾ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಗುರುವಾರ ಸಂಜೆ ಇಲ್ಲಿನ ಅಂಚೆ ವೃತ್ತದ ಬಳಿ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.  

ಕೇಂದ್ರದಲ್ಲಿ 345ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವುದರ ಮೂಲಕ ಎನ್ಡಿಎ ನೇತೃತ್ವದ ಸಕರ್ಾರವು ಮತ್ತೆ ರಚನೆಯಾಗಲಿದೆ.

    ಈ ದೇಶ ಕಂಡ ಅಪರೂಪದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಮಂತ್ರಿಯಾಗಿ ಮೇ.29 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.  ಮೋದಿಯವರ ಕನಸು ನನಸಾಗಿದೆ.  ರಾಜ್ಯದ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ 25 ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. 

ವಿಜಯೋತ್ಸವದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ|| ಬಸವರಾಜ ಕೇಲಗಾರ, ಭಾರತಿ ಜಂಬಗಿ, ಪ್ರಕಾಶ ಪೂಜಾರ, ಉಮೇಶ ಹೊನ್ನಾಳಿ, ಕೆ.ಬಿ.ಶ್ರೀನಿವಾಸ, ವಿಶ್ವನಾಥ ಪಾಟೀಲ, ರಾಮಣ್ಣ ಕೊಲಕಾರ, ಮಂಜುಳಾ ಹತ್ತಿ, ಮಂಜುಳಾ ಗೌಡಶಿವಣ್ಣನವರ, ಚೋಳಪ್ಪ ಕಸವಾಳ, ಎ.ಬಿ.ಪಾಟೀಲ, ಗಂಗಮ್ಮ ಹಾವನೂರ, ಬಸವರಾಜ ಲಕ್ಷ್ಮೇಶ್ವರ, ಕೊಟ್ರೇಶ್ ಎಮ್ಮಿ, ಶಿವಯೋಗಿ, ಚನ್ನಮ್ಮ ಗುರುಪಾದೇವರಮಠ, ಹನುಮಂತಪ್ಪ ಚಳಗೇರಿ, ಬಸವರಾಜ ಪಾಟೀಲ, ರಾಜಣ್ಣ ಬಾಕಳೆ, ರೂಪಾ ಬಾಕಳೆ ಸೇರಿದಂತೆ ಮತ್ತಿತರರು ಇದ್ದರು.