ಲೋಕದರ್ಶನ ವರದಿ
ಗೋಕಾಕ: ಗೋಕಾಕ ತಾಲ್ಲೂಕಿನ ಉದಗಟ್ಟಿ ಗ್ರಾಮದಲ್ಲಿ ಹುಟ್ಟಿದ ಅಪರೂಪದ ಜನಪದ ಕಲೆ ದಟ್ಟೀಕುಣಿತ. ಉದಗಟ್ಟಿ, ಹಡಗಿನಾಳ, ತಳಕಟ್ನಾಳ ಗ್ರಾಮಗಳ ದಟ್ಟಿ ಮೇಳಗಳು ಬೀದರ, ಬೆಂಗಳೂರು, ದೆಹಲಿ, ಕೇರಳ, ಆಂದ್ರ ಪ್ರದೇಶ, ತಮಿಳುನಾಡು ಮುಂತಾದೆಡೆಗಳಲ್ಲಿ ದಟ್ಟೀ ಕುಣಿತ ಪ್ರದಶರ್ಿಸಿದ್ದು, ಅಭಿಮಾನದ ಸಂಗತಿಯೆಂದು ನ್ಯಾಯವಾದಿ ಮತ್ತು ಸ್ವತಃ ದಟ್ಟೀಕುಣಿತದ ಕಲಾವಿದರಾದ ಉದ್ದಣ್ಣ ಗೊಡೇರ ತಿಳಿಸಿದ್ದಾರೆ.
ಅವರು ನಗರದ ನಿಸರ್ಗ ನಿಲಯದಲ್ಲಿ 'ಸಾಹಿತ್ಯ ಚಿಂತನ ಕಮ್ಮಟ' ಹಮ್ಮಿಕೊಂಡ 'ದಟ್ಟಿ ಕುಣಿತ' ಕಲೆಯ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಗೋಷ್ಠಿಯ ಅಧ್ಯಕ್ಷರಾದ ಜಾನಪದ ತಜ್ಞ ಡಾ| ಸಿ.ಕೆ.ನಾವಲಗಿ ಮಾತನಾಡುತ್ತ 'ದಟ್ಟೀಕುಣಿತ' ಕಲೆಯ ಮೂಲ ಪುರಾಣದಲ್ಲಿದೆ-ಅದೆಂದರೆ ಶಿವನಿಂದ ವರ ಪಡೆದ ಭಸ್ಮಾಸುರ, ಶಿವನ ತಲೆ ಮೇಲೇ ಕೈಯಿಟ್ಟು ಅವನನ್ನು ಭಸ್ಮ ಮಾಡಲು ವಿಷ್ಣು ದಟ್ಟೀ (ಸೀರೆ) ಉಟ್ಟು ಮೋಹಿನಿ (ಸ್ತ್ರೀ) ಅವತಾರ ತಾಳಿ, ನೃತ್ಯ ಮಾಡಿ ಭಸ್ಮಾಸುರನ ಕೈ ಅವನ ತಲೆ ಮೇಲೆ ಬರುವಂತೆ ಮಾಡಿ, ಅವನಿಂದ ಅವನೇ ಸುಟ್ಟು ಹೋಗುವಂತೆ ಮಾಡುತ್ತಾನೆ. ಹಾಗೆಯೇ ಪಾರ್ವತಿ ಆದಿಶಕ್ತಿಯ ರೂಪ ಧರಿಸಿ, ದಟ್ಟಿ ತೊಟ್ಟು ಶುಂಭ-ನಿಶುಂಭರ, ಮಹಿಷಾಸುರರ ವಧೆ ಮಾಡಲು ವೀರ ನೃತ್ಯ ಮಾಡಿದಳು.
ಅವಳ ಆ ವೀರ ನೃತ್ಯ ಪರಾಪರೆಯೇ ದೇವರ ಮುಂದೆ ನಾಟ್ಯ ಸೇವೆ ನೀಡುವುದಕ್ಕಾಗಿ ಬೆಳೆದು ಬಂತೆಂದು ಐತಿಹ್ಯವಿದೆ. 'ದಟ್ಟೀಕುಣಿತ' ಕಲೆ ಗೋಕಾಕ ನಾಡು ಕನರ್ಾಟಕ ರಾಜ್ಯದ ಜಾನಪದಕ್ಕೆ ಕೊಟ್ಟ ಅಮೂಲ್ಯ ಕೊಡುಗೆ ಎಂದು ಡಾ| ಸಿ.ಕೆ. ನಾವಲಗಿ ಅಭಿಮಾನದುಂಬಿ ಮಾತನಾಡಿದರು.
ಸಂಚಾಲಕಿ ಶಕುಂತಲಾ ದಂಡಗಿ ಪ್ರಾಸ್ತಾವಿಕ ಮಾತನಾಡಿದರು. ವಿ.ಪಿ.ಪಾಟೀಲ ಸ್ವಾಗತಿಸಿದರು, ಬಸವಲಿಂಗಪ್ಪ ಚೌಬಾರಿ ಪ್ರಾಥರ್ಿಸಿದರು, ಕಲಾವಿದ ಈಶ್ವರಚಂದ್ರ ಬೆಟಗೇರಿ ನಿರೂಪಿಸಿ ವಂದಿಸಿದರು.
ಶಿವಜಾತ ಕಾಮೋಜಿ, ದ್ರಾಕ್ಷಾಯಿಣಿ ಕಾಮೋಜಿ, ಶಿವಲಿಂಗಪ್ಪ ಬಾಗೇವಾಡಿ, ಆಸಿಸ್ ಆನಂದ ಬೆಟಗೇರಿ, ಮೇಘಾ ದಂಡಗಿ, ಬಿ.ಬಿ.ಪಟಗುಂದಿ, ಬಲದೇವ ಸಣ್ಣಕ್ಕಿ ಮೊದಲಾದವರು ಉಪಸ್ಥಿತರಿದ್ದರು.