ಕೊಲಂಬಿಯಾ ಜೋಡಿಗೆ ಯುಎಸ್ ಪುರುಷರ ಡಬಲ್ಸ್ ಕಿರೀಟ

 ನ್ಯೂಯಾರ್ಕ್, ಸೆ 7:  ಜ್ಯೂನ್ ಸೆಬಾಸ್ಟಿಯನ್ ಕಬಲ್ ಹಾಗೂ ರಾಬರ್ಟ್  ಫರಾಹ್ ಕೊಲಂಬಿಯಾ ಜೋಡಿಯು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಮಹತ್ವದ ಟೆನಿಸ್ ಟೂನರ್ಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆ ಮೂಲಕ ಸತತ ಎರಡನೇ ಗ್ರ್ಯಾನ್ ಸ್ಲ್ಯಾಮ್ ಗೆಲುವಿನ ನಗೆ ಬೀರಿತು.  ಶುಕ್ರವಾರ ಒಂದು ಗಂಟೆ 31 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ  ಅದ್ಭುತ ಪ್ರದರ್ಶನ ತೋರಿದ ಕೊಲಂಬಿಯಾ ಜೋಡಿಯು ಸ್ಪೇನ್ನ ಮಾರ್ಸ್ಲ್ ಗ್ರ್ಯಾನೊಲ್ಲರ್ಸ್ ಮತ್ತು ಅಜರ್ೆಂಟೀನಾದ ಹೊರಾಸಿಯೊ ಜೆಬಲ್ಲೋಸ್ ಜೋಡಿಯ ವಿರುದ್ಧ 6-4, 7-5 ಅಂತರದಲ್ಲಿ ಗೆದ್ದು ಯುಎಸ್ ಓಪನ್ ಡಬಲ್ಸ್ ಕಿರೀಟ ತನ್ನದಾಗಿಸಿಕೊಂಡಿತು.  ಕಳೆದ ಜುಲೈನಲ್ಲಿ ನಡೆದಿದ್ದ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಜ್ಯೂನ್ ಸೆಬಾಸ್ಟಿಯನ್ ಕಬಲ್ ಹಾಗೂ ರಾಬರ್ಟ್ ಫರಾಹ್ ಜೋಡಿಯು ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಗೆದ್ದಿತ್ತು. ಆ ಮೂಲಕ ಗ್ರ್ಯಾನ್ ಸ್ಲ್ಯಾಮ್ ಗೆದ್ದು ಕೊಲಂಬಿಯಾದ ಮೊದಲ ಜೋಡಿ ಎಂಬ ಸಾಧನೆಗೆ ಭಾಜನವಾಗಿತ್ತು. ಇದೀಗ ಯುಎಸ್ ಓಪನ್ನಲ್ಲೂ ಪ್ರಶಸ್ತಿ ಗೆದ್ದು ಗೌರವ ಹೆಚ್ಚಿಸಿಕೊಂಡಿದೆ.