ಶಾಸಕ ಶ್ರೀನಿವಾಸ ತಾಲೂಕಿನ ಒಟ್ಟು 40 ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ತಲಾ 5 ಫುಟ್‌ಬಾಲ್ ವಿತರಣೆ

ಶಾಸಕ ಶ್ರೀನಿವಾಸ ತಾಲೂಕಿನ ಒಟ್ಟು 40 ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ತಲಾ 5 ಫುಟ್‌ಬಾಲ್ ವಿತರಣೆ  MLA Srinivas distributes 5 footballs each to a total of 40 government high schools and government pr

ಲೋಕದರ್ಶನ ವರದಿ 

ಹಾನಗಲ್ 15: ಶಾಸಕ ಶ್ರೀನಿವಾಸ ಮಾನೆ ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ತಾಲೂಕಿನ ಒಟ್ಟು 40 ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ತಲಾ 5 ಫುಟ್‌ಬಾಲ್ ವಿತರಿಸಿದರು.   

  ನವದೆಹಲಿಯ ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್ ವತಿಯಿಂದ 5 ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ 35 ಸರ್ಕಾರಿ ಪ್ರೌಢಶಾಲೆಗಳಿಗೆ ಫುಟ್‌ಬಾಲ್ ವಿತರಿಸಿ, ಶಿಕ್ಷಣ ಜೊತೆಗೆ ಕ್ರೀಡೆಗಳಿಗೂ ಮಹತ್ವ ನೀಡುವ ಅಗತ್ಯವಿದೆ. ಅಂದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಮಾನಸಿಕ, ದೈಹಿಕ ಬೆಳವಣಿಗೆ ಸಾಧ್ಯವಾಗಲಿದೆ. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ನಾಯಕತ್ವ ಗುಣ ಬೆಳೆಸುವಲ್ಲಿ ಸಹಕಾರಿಯಾಗಿವೆ.

ಈಗಾಗಲೇ ರಾಜ್ಯ ಸರ್ಕಾರ ಕ್ರೀಡೆಗಳಿಗೆ ಹೆಚ್ಚು ಮಹತ್ವ ನೀಡುವ ಉದ್ದೇಶದಿಂದ ಶಾಲಾ ಹಂತದಿಂದಲೇ ಹೆಚ್ಚು ಉತ್ತೇಜನ ನೀಡುತ್ತಿದೆ. ಶಿಕ್ಷಕರು ಕ್ರೀಡೆ ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಿ, ವೇದಿಕೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಕಾಳಜಿ ವಹಿಸುವಂತೆ ಶಾಸಕ ಮಾನೆ ಈ ಸಂದರ್ಭದಲ್ಲಿ ಕರೆ ನೀಡಿದರು. 

  ಬಿಇಒ ಆರ್‌.ವಿ.ಚಿನ್ನಿಕಟ್ಟಿ, ಇಸಿಒ ಬಸವರಾಜ ಸಂಗೂರ, ಪುರಸಭೆ ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಮುಖ್ಯೋಪಾಧ್ಯಾಯರಾದ ಎಸ್‌.ಈ.ನರೇಗಲ್, ಯೋಗಾನಂದ, ಯಲ್ಲಪ್ಪ ಲಮಾಣಿ, ಎಸ್‌.ಎನ್‌.ಬೋಗಾರ, ಎಂ.ಎಸ್‌.ಕೂನಬೇವು, ಎಸ್‌.ಸಿ.ಚಿಕ್ಕಮಠ, ಮುಖಂಡರಾದ ಡಾ.ಚನ್ನಪ್ಪ ದೊಡ್ಡಚಿಕ್ಕಣ್ಣನವರ ಇದ್ದರು.