ವಾಷಿಂಗ್ಟನ್, ಮೇ ೯,ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಸಿಬ್ಬಂದಿಯೊಬ್ಬರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಹಿನ್ನಲೆಯಲ್ಲಿ ಶ್ವೇತಭವನ ಜಾಗೃತಗೊಂಡಿದೆ. ಕೂಡಲೇ ಅಧ್ಯಕ್ಷ ಟ್ರಂಪ್ , ಉಪಾಧ್ಯಕ್ಷ ಮೈಕ್ ಪೆನ್ಸ್ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಪರೀಕ್ಷಾ ವರದಿಯಲ್ಲಿ ನೆಗೇಟಿವ್ ಬಂದಿರುವುದರಿಂದ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಹಿನ್ನಲೆಯಲ್ಲಿ ಟ್ರಂಪ್ ಇನ್ನು ಮುಂದೆ ನಿತ್ಯವೂ ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಕೊರೊನಾ ಸೋಂಕಿತ ಆಪ್ತ ಸಹಾಯಕ ಟ್ರಂಪ್ ಅವರ ಸಮೀಪ ಕಾರ್ಯನಿರ್ವಹಿಸಿದ್ದರು. ಅಧ್ಯಕ್ಷರ ಭೋಜನ ವ್ಯವಸ್ಥೆ, ಅವರಿಗೆ ವಸ್ತ್ರಗಳನ್ನು ಒದಗಿಸುವುದು ಮತ್ತಿತರ ಕೆಲಸನಿರ್ವಹಿಸುತ್ತಿದ್ದರು ಎಂದು ಸಿಬಿಎನ್ ನ್ಯೂಸ್ ವರದಿ ಮಾಡಿದೆ ಆದರೆ, ಟ್ರಂಪ್ ಇದನ್ನು ತಳ್ಳಿಹಾಕಿದ್ದಾರೆ. ಸಹಾಯಕನನ್ನು ಅತ್ಯಂತ ಕಡಿಮೆ ಸಲ ಭೇಟಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ, ತಾವು ಹಾಗೂ ಉಪಾಧ್ಯಕ್ಷ ಕರೋನಾ ಪರೀಕ್ಷೆಗೆ ಒಳಗಾಗಿದ್ದು ನೆಗಟೀವ್ ವರದಿ ಬಂದಿದೆ. ಈವರೆಗೆ ವಾರಕ್ಕೊಮ್ಮೆ ಪರೀಕ್ಷೆ ನಡೆಸಿಕೊಳ್ಳುತ್ತಿದೆ, ಇನ್ನೂ ಮುಂದೆ ದಿನವೂ ಕೊರೊನಾ ಪರೀಕ್ಷೆಗೆ ಒಳಗಾಗುತ್ತೇನೆ ಎಂದು ತಿಳಿಸಿದ್ದಾರೆ.