ಯುಎಸ್ ಓಪನ್: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್, ಒಸಾಕ

ನ್ಯೂಯಾಕರ್್, ಆ 22            ಸೋಮವಾರದಿಂದ ಆರಂಭವಾಗುವ ಯುಎಸ್ ಓಪನ್ ಟೂರ್ನಿಯಲ್ಲಿಯೂ ವಿಶ್ವ ಅಗ್ರ ಕ್ರಮಾಂಕ ಹಾಗೂ ಮಾಜಿ ಚಾಂಪಿಯನ್ಗಳಾದ ನೊವಾಕ್ ಜೊಕೊವಿಚ್ ಹಾಗೂ ನವೋಮಿ ಒಸಾಕ ಅವರು ಅಗ್ರಸ್ಥಾನ ಪಡೆದಿದ್ದಾರೆ. 

 ಮೂರು ಬಾರಿ ಯುಎಸ್ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರು ಇತ್ತೀಚೆಗೆ ಮುಕ್ತಾಯವಾಗಿದ್ದ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ವಿಶ್ವಾಸದಲ್ಲಿದ್ದು, 2017ರ ಚಾಂಪಿಯನ್ ರಫೆಲ್ ನಡಾಲ್ ಅವರ ಹಾದಿಯಲ್ಲಿ ಈ ಬಾರಿ ಯುಎಸ್ ಓಪನ್ ಟೂರ್ನಿಯಲ್ಲಿ ಹೋರಾಟ ನಡೆಸಲಿದ್ದಾರೆ. 

   21ನೇ ಗ್ರ್ಯಾನ್ ಸ್ಲ್ಯಾಮ್ ಮೇಲೆ ಕಣ್ಣಿಟ್ಟಿರುವ ರೋಜರ್ ಫೆಡರರ್ ಅವರು ಯುಎಸ್ ಓಪನ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇವರ ಹೋರಾಟದ ಹಾದಿಯಲ್ಲಿ ಆಸ್ಟ್ರಿಯನ್ ಡೊಮಿನಿಚ್ ಥೀಮ್, ರಷ್ಯಾದ ಡೆನಿಲ್ ಮೆಡ್ವೆಡೆವ್ ಹಾಗೂ ಜರ್ಮನಿಯ ಅಲೆಗ್ಸಾಂಡರ್ ಜ್ವೆರೆವ್ ಅವರು ಎದುರಾಗಲಿದ್ದಾರೆ.  

 ಅಗ್ರ 32 ಪುರುಷರ ಪಟ್ಟಿಯಲ್ಲಿ ಮಾಜಿ ಯುಸ್ ಚಾಂಪಿಯನ್ಗಳಾದ ಕ್ರೋವೇಷ್ಯಾದ ಮರಿನ್ ಸಿಲಿಚ್(2014) ಹಾಗೂ ಸ್ವಿಜರ್ಲೆಂಡ್ನ ಸ್ಟ್ಯಾನ್ ವಾವ್ರಾಂಕ(2016) ಅವರು ಸ್ಥಾನ ಪಡೆದಿದ್ದಾರೆ. 

ಫ್ರೆಂಚ್ ಓಪನ್ ಚಾಂಪಿಯನ್ ಆ್ಯಶ್ಲೆ ಬಾರ್ಟ್ ಅವರು ಜಪಾನ್ನ ನವೋಮಿ ಒಸಾಕ ಅವರ ಬಳಿಕ ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಮತ್ತು ವಿಂಬಲ್ಡನ್ ಚಾಂಪಿಯನ್ ಸಿಮೋನಾ ಹಲೆಪ್ ಅವರು ಮುಂದಿನ ಸ್ಥಾನಗಳನ್ನು ಅಲಂಕರಿಸಿದ್ದಾರೆ. 

ಕಳೆದ ಬಾರಿ ಫೈನಲ್ ತಲುಪಿದ್ದ ಅಮೆರಿಕ ಸೇರೇನಾ ವಿಲಿಯಮ್ಸ್ ಅವರು 24ನೇ ಗ್ರ್ಯಾನ್ ಸ್ಲ್ಯಾನ್ ಮೇಲೆ ಕಣ್ಣಿಟ್ಟಿದ್ದು, ಎಂಟನೇ ಶ್ರೇಯಾಂಕ ಪಡೆದಿದ್ದಾರೆ. ಮತ್ತೊರ್ವ ಮಾಜಿ ಚಾಂಪಿಯನ್ ಸ್ಲೋನ್ ಸ್ಟಿಫೇನ್ಸ್ ಅವರು 11ನೇ ಶ್ರೇಯಾಂಕ ಪಡೆದಿದ್ದಾರೆ.