ನವದೆಹಲಿ, ಮೇ 20,ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ 2020 ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳ ದಿನಾಂಕದ ಗೊಂದಲ ಹಾಗೆಯೇ ಮುಂದುವರೆದಿದೆ.ಮೇ 31 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕರೋನ ಹಿನ್ನೆಲೆಯಲ್ಲಿ ಆಯೋಗ ಸತತವಾಗಿ ಈವರೆಗೆ ನಾಲ್ಕು ಬಾರಿ ರದ್ದು ಪಡಿಸಿದ್ದರೂ ಇನ್ನೂ ಹೊಸ ದಿನಾಂಕ ನಿಗದಿಯಾಗಿಲ್.ಲ ಇದೆ 4 ರಂದು ಸಭೆ ನಡೆಸಿದ್ದ ಆಯೋಗ, 20 ಬಳಿಕ ಹೊಸ ದಿನಾಂಕ ತಿಳಿಸುವುದಾಗಿ ಪರೀಕ್ಷಾರ್ಥಿಗಳಿಗೆ ಭರವಸೆ ನೀಡಿತ್ತು. ಈ ಬಗ್ಗೆ ತನ್ನ ವೆಬ್ಸೈಟಿನಲ್ಲಿ ಮಾಹಿತಿ ಪ್ರಕಟಿಸಿರುವ ಆಯೋಗ, ಕರೋನ, ಲಾಕ್ಡೌನ್ ವಿಸ್ತರಣೆಯ ಕಾರಣ ಪರೀಕ್ಷಾ ದಿನಾಂಕದ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಶೀಘ್ರವೇ ಪರಿಸ್ಥಿತಿ ಅವಲೋಕಿಸಿ ವೇಳಾಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದೆ.