ಈ ವಾರ ತೆರೆಗೆ ‘ಒಂದು ಶಿಕಾರಿಯ ಕಥೆ’

ಬೆಂಗಳೂರು,ಫೆ 03 ಶೆಟ್ಟೀಸ್ ಫಿಲಂ ಫ಼್ಯಾಕ್ಟರಿ ಲಾಂಛನದಲ್ಲಿ ರಾಜೀವ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ನಿರ್ಮಿಸಿರುವ ‘ಒಂದು ಶಿಕಾರಿಯ ಕಥೆ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಚಿನ್ ಶೆಟ್ಟಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸನತ್ ಬಾಲ್ಕುರ್ ಅವರ ಸಂಗೀತ ನಿರ್ದೇಶನವಿದೆ. ಯೊಗೇಶ್ ಗೌಡ ಛಾಯಾಗ್ರಹಣ ಹಾಗೂ ಬಿ.ಎಸ್.ಕೆಂಪರಾಜ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಮೋದ್ ಶೆಟ್ಟಿ, ಪ್ರಸಾದ್ ಚರ್ಕಾಡಿ, ಸಿರಿ ಪ್ರಹ್ಲಾದ್, ಅಭಿಮನ್ಯು ಪ್ರಜ್ವಲ್, ಎಂ.ಕೆ.ಮಠ, ಸಿರಿಪ್ರಿಯ ಮುಂತಾದವರಿದ್ದಾರೆ.