ಈಜಲು ಹೋದ ಇಬ್ಬರು ವಿದ್ಯಾರ್ಥಿಗಳ ಸಾವು
Two students die while swimming: Bellay news
ಹೊಸಪೇಟೆ 22: ನಗರದ ಕಾರಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ ಅರವಿಂದ (13ವರ್ಷ) ಹನುಮಂತ (13 ವರ್ಷ) ಕಾರಿಗನೂರಿನಲ್ಲಿ ಇರುವಂತ ಚಕ್‌ಡ್ಯಾಂನಲ್ಲಿ ಶನಿವಾರದ ಮದ್ಯಾಹ್ನ ನಂತರ ಈಜಲು ಹೋದ ವಿದ್ಯಾರ್ಥಿಗಳು ಮರಳಿ ಮನೆಗೆ ಬಾರದೆ ಸಾವನ್ನಪ್ಪಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದಎಚ್.ಎನ್ ಮಹಮ್ಮದ್‌ಇಮಾಮ್ ನಿಯಾಜಿರವರು ಕಾರಿಗನೂರಿಗೆ ತೆರಳಿ ಮೃತರಕುಟುಂಬಕ್ಕೆ ಸಾಂತ್ವಾನ ಹೇಳಿದರು. ಹಾಗೂ ಸ್ಥಳದಲ್ಲೇ ಇಬ್ಬರ ಮಕ್ಕಳ ಪೋಷಕರಿಗೆ ತಲಾ 25,000 ವೈಯಕ್ತಿಕವಾಗಿಆರ್ಥಿಕ ಸಹಾಯ ಮಾಡಿ, ಇನ್ನು ಹೆಚ್ಚಿನ ಸಹಾಯವನ್ನು ಕರ್ನಾಟಕ ಸರಕಾರದಿಂದ ಕೊಡಿಸುವ ಭರವಸೆ ನೀಡಿದರು. ಹಾಗೂ ಕುಟುಂಬದಆಧಾರ ಸ್ಥಂಭವಾಗುತ್ತಾರೆಂದು ಸಾವಿರಾರು ಕನಸುಗಳನ್ನು ಕಂಡಿದ್ದತಂದೆ ತಾಯಿಗಳಿಗೆ ಮರ್ಮಾಘಾತವಾಗಿದ್ದು ಭಾರಿಸಲಾಗದಂತ ನೋವನ್ನುಅನುಭವಿಸುತ್ತಿರುವುದನ್ನುಕಂಡು ಆ ಮಕ್ಕಳ ತಂದೆ ತಾಯಿಗಳಿಗೆ ಹಾಗೂ ಇಡೀಕುಟುಂಬಕ್ಕೆ ಮಕ್ಕಳ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ಎಂದು ಭಗವಂತನಲ್ಲಿದುಃಖದಿಂದ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ನಗರ ಸಭಾ ಅಧ್ಯಕ್ಷರಾದ ರೂಪೇಶ್ ಕುಮಾರ್, ಹಾಗೂ ನಗರ ಸಭಾ ಸದಸ್ಯರಾದ ನಾಗೇಂದ್ರ, ಹಾಗೂ ನಗರ ಸಭಾ ಸದಸ್ಯರಾದ ದ್ವಾರಕೇಶ್, ಬಜಾರ್ಪ, ಪರಮೇಶಗೌಡ್ರು, ಭಾಷಾ, ಭರತ್, ಮೋಹನ್ ಸ್ವಾಮಿ ಫಕ್ರುದ್ದೀನ್, ಕಾರಿಗನೂರು ಗ್ರಾಮದ ನೂರಾರು ಜನ ಮುಖಂಡರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 