ಲೋಕದರ್ಶನ ವರದಿ
ಬ್ಯಾಡಗಿ28: ಕಳೆದೊಂದು ವಾರದ ಹಿಂದಷ್ಟೇ ಜರುಗಿದ್ದ ಮೊಬೈಲ್ ಕಳ್ಳತನ ಪ್ರಕರಣವನ್ನು ಭೇದಿಸಿದ ಸ್ಥಳೀಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಹಿರೇಕೆರೂರ ತಾಲ್ಲೂಕ ನಿಟ್ಟೂರ ಗ್ರಾಮದ ಅಯ್ಯೂಬ್ಖಾನ್ ಅಲಿಯಾಸ್ ಅಯ್ಯು ದಾದಾಪೀರ್ ರಟ್ಟಿಹಳ್ಳಿ (20) ಹಾಗೂ ರಿಜ್ವಾನ್ ನೂರುಲ್ಲಾ ಹಂಚಿ (20) ಎಂದು ಗುತರ್ಿಸಲಾಗಿದ್ದು, ಕಳುವಾದ ಮೋಬೈಲ್ಗಳನ್ನು ಹಿರೇಕೆರೂರ ತಾಲ್ಲೂಕಿನ ಹಂಸಭಾವಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಮೊಬೈಲ್ ಸೆಟ್ಟಗಳನ್ನು ಮುಚ್ಚಿಟ್ಟಿದ್ದಾಗಿ ತಿಳಿದು ಬಂದಿದ್ದು, ಅಡಿಶನಲ್ ಎಸ್ಪಿ ಜಿ.ಎ.ಜಗದೀಶ, ಡಿವೈಎಸ್ಪಿ ಎಲ್.ಕುಮಾರಪ್ಪ, ಸಿಪಿಐ ಚಿದಾನಂದ ಅವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪಿಎಸ್ಐ ಮಹಾಂತೇಶ, ಸಿಬ್ಬಂದಿಗಳಾದ ಕುರುವತ್ತೆಪ್ಪಗೌಡ ಗಡಿಯಪ್ಪಗೌಡ್ರ, ಜಗದೀಶ ಬ್ಯಾಡಗಿ, ಹನುಮಂತ ಕಡೇಮನಿ, ಶ್ರೀಕಾಂತ್ ಪೂಜಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ರೂ.1.60 ಲಕ್ಷ ಮೌಲ್ಯದ 31 ಮೋಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ವಾರದಲ್ಲಿ ಕಳುವು ಪತ್ತೆ: ಕಳೆದ ಡಿ.19 ರಂದು ಹಂಸಭಾವಿ ರಸ್ತೆಯಲ್ಲಿನ ಕಮ್ಯೂನಿಕೇಶನ್ ಮೋಬೈಲ್ ಅಂಗಡಿ ಮುಂಭಾಗದ ಕಬ್ಬಿಣದ ಶಟರ್ಸ ಮುರಿದು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಮೊಬೈಲ್ ಸೆಟ್ಗಳನ್ನು ಕಳ್ಳತನ ಮಾಡಿ ಚಾಲಾಕಿ ಕಳ್ಳರು ಪರಾರಿಯಾಗಿದ್ದರು, ಜನನಿಬಿಡ ಪ್ರದೇಶದಲ್ಲಿಯೇ ಕಳ್ಳತನವಾಗಿದ್ದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು, ಅಪರಾಧ ವಿಭಾಗದ ಎಎಸ್ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕರೆಸಿ ಪರಿಶೀಲನೆ ನಡೆಸಿದರಾದರೂ ಕಳ್ಳರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.