ಹಿಡಕಲ್‌ದಲ್ಲಿ ವಿಶ್ವ ಪತ್ರಿಕಾ ದಿನ ಆಚರಣೆ

ಹಿಡಕಲ್‌ದಲ್ಲಿ ವಿಶ್ವ ಪತ್ರಿಕಾ ದಿನ ಆಚರಣೆ   World Press Freedom Day celebrated in Hidkal

ಮುಗಳಖೋಡ 03: ಸಮೀಪದ ಹಿಡಕಲ್ ಗ್ರಾಮದ ಜಡಿ ಸಿದ್ದೇಶ್ವರ ನಿಲಯದ ಆವರಣದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಭಾಗ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಕಾರ್ಯಕ್ರಮ ಆಚರಿಸಲಾಯಿತು.  ಸಮಾರಂಭದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಬಾಗ ಹಾಗೂ ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿಗಳಾದ ಸಾಹಿತಿ ಟಿ ಎಸ್ ವಂಟಗೂಡಿ ಸಸಿಗೆ ನೀರು ಎರೆಯುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ ಮೂರು ಅಂಗಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅದೂವೇ ಪತ್ರಿಕಾರಂಗ ಇದು ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಲೋಕಾಯುಕ್ತ ಸಂಸ್ಥೆ ಇದ್ದಂತೆ ಇವತ್ತು ಸಾಮಾಜಿಕ ರಾಜಕೀಯ ಶೈಕ್ಷಣಿಕ ಒಟ್ಟು ಜಗತ್ತಿನ ಶುದ್ಧೀಕರಣದ ರೂವಾರಿಗಳೆಂದರೆ ಪತ್ರಕರ್ತರು.

ಪತ್ರಕರ್ತರ ಲೇಖನಿ ಖಡ್ಗಕ್ಕಿಂತ ಹರಿತ ಕವಿಗಳು ಅಧಿಕೃತ ಶಾಸಕರಿದ್ದಂತೆ ಪತ್ರಕರ್ತರು ಅನಧಿಕೃತ ಲೋಕಾಯುಕ್ತರಿದ್ದಂತೆ ಪತ್ರಕರ್ತರ ಲೇಖನಿಯಲ್ಲಿ ಬೆಂಕಿಯೂ ಇರುತ್ತದೆ, ಬೆಳಕೂ ಇರುತ್ತದೆ. ಪತ್ರಕರ್ತರ ಒಂದು ಸಾಲಿನ ಸುದ್ದಿ ಒಂದು ಸರ್ಕಾರವನ್ನು ರಚಿಸಬಲ್ಲದು ಒಂದು ಸರ್ಕಾರವನ್ನು ಉರುಳಿಸಲುಬಹುದು ಪತ್ರಕರ್ತರು ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ ಅನ್ಯಾಯ ಆದವರಿಗೆ ತಮ್ಮ ಬರವಣಿಗೆ ಮೂಲಕ ನ್ಯಾಯ ದೊರಕಿಸಿಕೊಡುವ ಕಾರ್ಯವನ್ನು ಮಾಡುತ್ತಾರೆ. ಪ್ರತಿಯೊಬ್ಬರೂ ಪತ್ರಿಕೆಗಳನ್ನು ಕೊಂಡು ಓದುವಂತವರಾಗಬೇಕು ಪತ್ರಿಕೆಗಳು ಶುದ್ಧ ಸಮಾಜ ಕಟ್ಟುವ ಕಾರ್ಯ ಮಾಡುತ್ತವೆ ಎಂದು ಸಾಹಿತಿ ಟಿ ಎಸ್ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.  ವೇದಿಕೆಯ ಮೇಲೆ ಅಮಿತ ಪೂಜೇರಿ, ಹಾಲಸಿದ್ದ ವಂಟಗೂಡಿ, ಜಡಿಸಿದ್ದ ವಂಟಗೂಡಿ, ರಾಮು ವಂಟಗೂಡಿ, ವಿವೇಕ ವಂಟಗೂಡಿ, ಅಶೋಕ ಪೂಜೇರಿ, ಉಪಸ್ಥಿತರಿದ್ದರು.  ಭಾಗ್ಯಶ್ರೀ ಪೂಜಾರಿ ಸ್ವಾಗತಿಸಿ ನಿರೂಪಿಸಿದರು.ಲಕ್ಷ್ಮೀ ಪೂಜಾರಿ ವಂದಿಸಿದರು.