ಘಟಪ್ರಭಾ: ಇಂದು ನಡೆದ ಗೋಕಾಕ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೊಣ್ಣೂರು ಪುರಸಭೆಯ ಅತೀ ಹೆಚ್ಚು ಮತದಾರರು ಇರುವ ಮತಗಟ್ಟೆ ಸಂಖ್ಯೆ 59ರಲ್ಲಿ ಮತಯಂತ್ರ ಎರಡು ಬಾರಿ ಹಾಳಾಗಿದ್ದ ರಿಂದ ಮತದಾರರು ಪರದಾಡಿದರೆ ಕೆಲವರು ವಾಪಸ ಮನೆಗೆ ತೆರಳಿದಘಟನೆ ನಡೆದಿದೆ.
ಬೆಳಿಗ್ಗೆ ಹಾಳಾದಾಗ ಇನ್ನೊಂದು ಯಂತ್ರ ಹಾಕಿಕೂಡಲೆ ಮತದಾನ ಪ್ರಾರಂಭ ಮಾಡಲಗಿತ್ತು. ಮತ್ತೆ 12 ಗಂಟೆ ಸುಮಾರಿಗೆ ಕೈ ಕೊಟ್ಟಾಗ ಅಲ್ಲಿ ಬೇರೆ ಮತ ಯಂತ್ರ ಇಲ್ಲದ ಕಾರಣ ಮತದಾನ ಸುಮಾರ 1 ಗಂಟೆಗೂ ಹೆಚ್ಚು ಸಮಯ ತಡವಾದ ಕಾರಣ ಸಾಲಿನಲ್ಲಿ ನಿಂತ ಮತದಾರರಲ್ಲಿ ಕೆಲವರು ಮನೆಗೆ ತೆರಳಿದರು.
ನಂತರ ಬೇರೆಕಡೆಯಿಂದ ಮತಯಂತ್ರ ತರಿಸಿ ಮತದಾನ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮುಂಜಾಗೃತೆ ವಹಿಸದ ಚುನಾವಣಾ ಸಿಬ್ಬಂದಿಯನ್ನು ಮತದಾರರು ತರಾಟೆಗೆ ತೆಗೆದುಕೊಂಡರು ನಂತರ ಶಾಂತರೀತಿಯಲ್ಲಿ ಮತದಾನ ನಡೆಯಿತ್ತಾದರು ಸಂಜೆ 6ಗಂಟೆ ನಂತರವುಜನರು ಸಾಲಿನಲ್ಲಿ ನಿಂತಿರುವುದು ಮತಗಟ್ಟೆಯಲ್ಲಿ ಕಂಡುಬಂದಿತು.