ಜನವರಿ ೩೧, ಫೆ ೧ ರಂದು ಎರಡು ದಿನ ದೇಶಾದ್ಯಂತ ಬ್ಯಾಂಕ್ ಉದ್ಯೋಗಿಗಳ ಮುಷ್ಕರ

ನವದೆಹಲಿ, ಜ ೨೮,ವೇತನ ಪರಿಷ್ಕರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ  ಪ್ರಮುಖ   ಬೇಡಿಕೆಯೊಂದಿಗೆ  ಇದೇ ಜನವರಿ ೩೧  ಹಾಗೂ  ಫೆಬ್ರವರಿ ೧ ರಂದು   ಬ್ಯಾಂಕ್ ಒಕ್ಕೂಟಗಳು  ದೇಶವ್ಯಾಪ್ತಿ  ಮುಷ್ಕರಕ್ಕೆ ಸಿದ್ಧತೆ ನಡೆಸುತ್ತಿವೆ. ಒಂಬತ್ತು ಬ್ಯಾಂಕ್ ಯೂನಿಯನ್ ಗಳ   ವೇದಿಕೆಯಾದ ಯುನೈಟೆಡ್ ಬ್ಯಾಂಕ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ನೀಡಿರುವ ಕರೆಗೆ   ಬ್ಯಾಂಕ್  ಉದ್ಯೋಗಿಗಳು  ಮುಷ್ಕರ  ನಡೆಸಲು ಮುಂದಾಗಿದ್ದಾರೆ.

ಯೂನಿಯನ್ ಗಳ   ವೇದಿಕೆಯಲ್ಲಿ   ಯುನೈಟೆಡ್ ಪ್ಲಾಟ್‌ಫಾರ್ಮ್‌ನಲ್ಲಿ ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಫೆಡರೇಶನ್ (ಎಐಬಿಒಸಿ), ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ (ಎಐಬಿಇಎ) ಮತ್ತು ನ್ಯಾಷನಲ್ ಅಸೋಸಿಯೇಶನ್ ಆಫ್ ಬ್ಯಾಂಕ್ ವರ್ಕರ್ಸ್ (ಎನ್‌ಒಬಿಡಬ್ಲ್ಯೂ) ಸೇರಿವೆ.  ಉದ್ಯೋಗಿಗಳ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯ ಕಾರ್ಮಿಕ ಆಯುಕ್ತರ  ಸಮ್ಮುಖದಲ್ಲಿ   ನಡೆದ   ಸಂದಾನಗಳಲ್ಲಿ ಯಾವುದೇ  ಪ್ರಗತಿ ಸಾಧ್ಯವಾಗಿಲ್ಲ  ಹಾಗಾಗಿ,   ಮುಷ್ಕರಕ್ಕೆ  ನೀಡಲಾಗಿರುವ  ನೋಟಿಸ್ ಅನ್ನು  ಒಕ್ಕೂಟಗಳು  ಹಿಂತೆಗೆದುಕೊಂಡಿಲ್ಲ ಎಂದು ಎಐಐಬಿಒಸಿ ಅಧ್ಯಕ್ಷ ಸುನಿಲ್ ಕುಮಾರ್ ಹೇಳಿದ್ದಾರೆ.  ಒಕ್ಕೂಟಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ಬ್ಯಾಂಕುಗಳ ಸಂಘದಿಂದ (ಐಬಿಎ) ಯಾವುದೇ  ಭರವಸೆ  ಸಿಕ್ಕಿಲ್ಲ ಎಂದು ಎಐಬಿಎ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.