ತುಮಕೂರು ಕೋವಿಡ್ ಕೇಂದ್ರದ ಕಾರ್ಯನಿರ್ವಹಣೆಗೆ ವೈದ್ಯರು ಸೇರಿ 180 ಸಿಬ್ಬಂದಿ ನಿಯೋಜನೆ

ಬೆಂಗಳೂರು, ಜುಲೈ 11: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ ಕೋರೋನಾ ವೈರಸ್  ನಿಯಂತ್ರಿಸುವ ಸಲುವಾಗಿ ಹೊಸದಾಗಿ  94 ವೈದ್ಯರುಗಳು, 86 ಇತರೆ ಸಿಬ್ಬಂದಿ ಸೇರಿ 180 ಜನರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. 

ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಡೆದ ವಾಕ್-ಇನ್-ಸಂದರ್ಶನದಲ್ಲಿ ವೈದ್ಯರು, ದಂತ ವೈದ್ಯರು, ಆಯುಷ್ ವೈದರು, ಸ್ಟಾಫ್ ನಸ್೯, ಸಹಾಯಕ ಸಿಬ್ಬಂದಿ, ಹಾಗೂ ನಾಲ್ಕನೇ ದರ್ಜೆ ನೌಕರರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. 

ಒಟ್ಟು 180 ವೈದ್ಯರು, ಅರೆವೈದ್ಯಕೀಯ, ಸಹಾಯಕರು, ನಾಲ್ಕನೇ ದರ್ಜೆ ನೌಕರರುಗಳಿಗೆ ಆದೇಶ ಪತ್ರ ನೀಡಲಾಗಿದೆ. ಇವರೆಲ್ಲರೂ ತುಮಕೂರು ರಸ್ತೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ(BIEC)ಅಲ್ಲಿ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ (ಸಿಸಿಸಿ) ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈ ಪಟ್ಟಿ ಇಬ್ಬರು ಎಂಬಿಬಿಎಸ್ ವೈದ್ಯರು, 60 ಬಿಡಿಎಸ್ ವೈದ್ಯರು, 6 ಸ್ಟಾಫ್ ನರ್ಸ್, 5 ಸಹಾಯಕ ನರ್ಸ್‌, 75 ಡಿ ದರ್ಜೆಯ ಸಿಬ್ಬಂದಿ ಸೇರಿದಂತೆ ಇತರರನ್ನು ಒಳಗೊಂಡಿದೆ.