ಫೋಟೊ ಶೀರ್ಷಿಕೆ: ರಾಯಬಾಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಹಾಗೂ ರೆಡ್ ರಿಬ್ಬನ್ ಘಟಕ, ಸಾರ್ವಜನಿಕ ಆರೋಗ್ಯ ಕೇಂದ್ರ ಮತ್ತು ಪಟ್ಟಣ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಟಿ.ಬಿ ಮುಕ್ತ ಭಾರತ -2025 ಅಭಿಯಾನದ ಅಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ಷಯ ರೋಗ ಮುಕ್ತ ಪಟ್ಟಣ ಜಾಗೃತಿ ಜಾಥಾದಲ್ಲಿ ಕಾಲೇಜಿನ ಪ್ರಾಂಶುಪಾಲ ರಾಜಕುಮಾರ ಕಾಗೆ, ರೆಡ್ ಕ್ರಾಸ್ ಹಾಗೂ ರೆಡ್ ರಿಬ್ಬನ್ ಘಟಕದ ಸಂಚಾಲಕ ಡಾ. ಪ್ರಸಾದ್ ಆರ್ ಎ., ಸಮುದಾಯ ಆರೋಗ್ಯ ಅಧಿಕಾರಿ ಮಹಾಂತೇಶ್ ಲೋಟೆ, ಟಿ.ಬಿ ರೋಗದ ಮೇಲ್ವಿಚಾರಕ ಈಶ್ವರ ಕಾಂಬಳೆ, ಪ.ಪಂ. ಮುಖ್ಯಾಧಿಕಾರಿ ಎಸ್ ಕೆ ಮಾಂಗ, ಪ.ಪಂ. ಅಧ್ಯಕ್ಷ ಅಶೋಕ್ ಅಂಗಡಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಸಂತೋಷ ಸಮಾಜೆ, ಐಕ್ಯೂಎಸಿ ಸಹ ಸಂಚಾಲಕ ಡಾ. ರವಿ ಎಂ. ವಿ., ಡಾ. ಮಿಥೋಜಿ ಎಸ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.