ತಾಳಿಕೋಟಿ, 22; ಪಟ್ಟಣದಲ್ಲಿ ಒಳ್ಳೆಯ ವಾಲಿಬಾಲ್ ಕ್ರೀಡಾ ಪಟುಗಳನ್ನು ಸಿದ್ಧಗೊಳಿಸಿದ ಕೀರ್ತಿ ದೈಹಿಕ ಶಿಕ್ಷಕರಾಗಿದ್ದ ದಿ. ಬಸವರಾಜ ಗದಗ್ ಹಾಗೂ ಬಿ.ಬಿ.ಪಾಟೀಲರಿಗೆ ಸಲ್ಲುತ್ತದೆ ಇವರ ಸ್ಮರಣಾರ್ಥ ಹಮ್ಮಿಕೊಂಡಿರುವ ಈ ವಾಲಿಬಾಲ್ ಪ್ರೀಮಿಯರ್ ಲೀಗನಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾ ಪಟುಗಳು ಒಳ್ಳೆಯ ಕ್ರೀಡಾ ಮನೋಭಾವದೊಂದಿಗೆ ಆಟವಾಡಲು ಪ್ರಯತ್ನಿಸಬೇಕು ಎಂದು ವಿ.ವಿ.ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ದಿ. ಬಸವರಾಜ ಗದಗ ಹಾಗೂ ದಿ.ಬಿ.ಬಿ. ಪಾಟೀಲ ಇವರ ಸ್ಮರಣಾರ್ಥ ಎಸ್.ಕೆ. ವಾಲಿಬಾಲ್ ಕ್ರೀಡಾಪಟುಗಳಿಂದ ಶ್ರೀ ಖಾಸ್ಗತೇಶ್ವರ ಮಹಾವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡ ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಸನ್ 1ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ವಿ.ವಿ. ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನ್ ಭಾಷಾ ಜಮಾದಾರ, ವಿವಿ ಸಂಘ ಕಾರ್ಯದರ್ಶಿ ಮುರಿಗೆಪ್ಪ ಸರಶೆಟ್ಟಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಶಿನಾಥ್ ಸಜ್ಜನ, ಎಸ್ ಕೆ ಪ.ಪೂ. ಕಾಲೇಜ ಅಧ್ಯಕ್ಷ ಎಂ.ಆರ್.ಕತ್ತಿ, ಎಸ್ ಕೆ ಹೈಸ್ಕೂಲ್ ಅಧ್ಯಕ್ಷ ಎಂ.ಜಿ.ಕತ್ತಿ, ಎಸ್ ಕೆ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ದಯಾನಂದ ಮೂಗಡ್ಲಿಮಠ, ಎಸ್ ಕೆ ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರಕುಮಾರ್ ಕೆ. ಅಂತರಾಷ್ಟ್ರೀಯ ಕ್ರೀಡಾಪಟು ಸಂಜೀವ್ ಹಜೇರಿ, ಈ ವೇಳೆ ಸಹಕಾರಿ ಬ್ಯಾಂಕ್ ನಿರ್ದೇಶಕ ಪ್ರಹ್ಲಾದ ಹಜೇರಿ, ರವಿ ಕಟ್ಟಿಮನಿ, ರಾಘು ಮಾನೆ, ನಿಸಾರ್ ಬೇಪಾರಿ, ಮಹೇಶ್ ಚಲವಾದಿ, ನಾಗೇಶ್ ಕಟ್ಟಿಮನಿ, ಬಸವರಾಜ ಗದಗ, ವಿಠ್ಠಲ್ ಮೋಹಿತೆ, ಈಶ್ವರ ಹೂಗಾರ, ಸದ್ದಾಂ ನಾಯ್ಕೋಡಿ, ಲಾಲ ಸಾಬ್ ನದಾಫ್, ಶಿವು ಶಹಾಪೂರ, ಸೌರಭ ಕುಲಕರ್ಣಿ, ವಿಶ್ವನಾಥ ಪಾಟೀಲ, ಮಲ್ಲು ಪಾಟೀಲ ಹಾಗೂ ಕ್ರೀಡಾಪಟುಗಳು ಇದ್ದರು. ಶಿಕ್ಷಕ ಡಾ. ಅನೀಲ ಕುಮಾರ್ ಇರಾಜ ನಿರೂಪಿಸಿ ವಂದಿಸಿದರು.