ನೇಕಾರರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ: ಟಿರಕಿ

ಕನರ್ಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡುತ್ತಿರುವಾಗ ಇತರರು


ಯಮಕನಮರಡಿ 20: ರೈತರು ನೇಕಾರರು ಒಂದೇ ನಾಣ್ಯದ ಎರಡು ಮುಖಗಳು, ಕಾರಣ ನಮ್ಮ ನೇಕಾರರ ಬಗ್ಗೆಯು ಮುತವಜರ್ಿವಹಿಸಿ ಮುಖ್ಯವಾಹಿನಿಗೆ ಬರುವಂತೆ ಶೈಕ್ಷಣಿಕ, ಆರೋಗ್ಯ ಮತ್ತು ಆಥರ್ಿಕ ಸಬಲತೆಯನ್ನು ಹೊಂದಬೇಕಾದಲ್ಲಿ ಸಕರ್ಾರ ಚಿಂತನೆ ಮಾಡಬೇಕಾಗಿದೆ ಎಂದು ಕನರ್ಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.

ಅವರು ದಿ 18 ರಂದು ಯಮಕನಮರಡಿಯಲ್ಲಿ ನಡೆದ ಕನರ್ಾಟಕ ರಾಜ್ಯ ನೇಕಾರ ಸೇವಾ ಸಂಘದ ಸಭೆಯಲ್ಲಿ ನೇಕಾರ ಸಮಾಜದವರನ್ನುದ್ದೇಶಿಸಿ ಮಾತನಾಡಿದರು.  

 ಕನರ್ಾಟಕ ರಾಜ್ಯದಲ್ಲಿ ನೇಕಾರರು ಶೇ. 33 ಸಂಖ್ಯೆಯಲ್ಲಿದ್ದು, ಬಹಳಷ್ಟು ಜನ ಆಥರ್ಿಕವಾಗಿ ಹಿಂದುಳಿದಿದ್ದು, ಸಕರ್ಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲಾಗದೆ, ಆರೋಗ್ಯ ಮತ್ತು ಉನ್ನತ ಶಿಕ್ಷಣದಿಂದಲೂ ಕೂಡಾ ವಂಚಿತರಾಗಿದ್ದಾರೆ ಎಂದು ಹೇಳಿದರು. ನೇಕಾರಿಕೆಯಿಂದ ಹೊರಬರಲಾಗದೇ ಬೇರೆ ಯಾವುದೇ ಉದ್ಯೋಗವನ್ನು ಅರಿಯದ ಈ ನೇಕಾರ ಸಮುದಾಯಕ್ಕೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕಾಗಿ ಅಸಂಘಟಿತ ನೇಕಾರರನ್ನು ಸಂಘಟಿಸಲು ಸಕರ್ಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ನೇಕಾರರ ಹಕ್ಕೊತ್ತಾಯಗಳಿಗೆ ಸಕರ್ಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. 

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಾಜೇಂದ್ರ ಮಿಜರ್ಿ, ಯಮಕನಮರಡಿ ಗ್ರಾಮದ ಕಾರ್ಯಕರ್ತರಾದ ಗಣೇಶ ಬಕರಿ, ವಿನಾಯಕ ಭಂಗಿ, ಶಿವರಾಜ ಮದಿಹಳ್ಳಿ, ಅನೀಲ ಮಾರ್ಯಾಳಿ, ವಿಶ್ವನಾಥ ಮುತ್ನಾಳಿ ಉಪಸ್ಥಿತರಿದ್ದರು.