ಬೆಟಗೇರಿ 28: ಯೇಸುಕ್ರಿಸ್ತನು ಎಲ್ಲಾ ಮಾನವರ ಪಾಪಕ್ಕಾಗಿ ಸತ್ತು ಮೂರನೇ ದಿನದಲ್ಲಿ ಮೃತ್ಯುಂಜಯನಾಗಿ ಎದ್ದು ಬಂದಿದ್ದಾರೆ ಸಂಗಮೇಶ ಹಾದಿಮನಿಯವರು ನರಸಾಪೂರ ಆಶ್ರಯ ಕಾಲೋನಿಯ ನ್ಯೂ ರೇಹೋಬೋತ್ ಚರ್ಚನ ಕಾರ್ಯಕ್ರಮದಲ್ಲಿ ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ ಮುತ್ತಪ್ಪ ಭಜಂತ್ರಿ ಮಾತನಾಡಿ ಯೇಸುಕ್ರಿಸ್ತನು ನಿನ್ನೆ ಇದ್ದ ಹಾಗೆ ಇವತ್ತು ನಿತ್ಯ, ನಿರಂತರವು ಹಾಗೆಯೇ ಇದ್ದಾನೆ. ಆತನಲ್ಲಿ ಬೇಡಿಕೊಳ್ಳುವವರೆಗೆ ಯಾವ ಮೈಲಿಗೂ ಕಡಿಮೆ ಇರುವುದಿಲ್ಲ. ಯೇಸುವಿನ ಬಳಗೆ ಬರುವವರನ್ನು ಆತನು ಸಂರಕ್ಷಿಸುತ್ತಾನೆ. ಯೇಸುವನ್ನು ನಂಬುವವರಿಗೆ ಶಾಂತಿ, ಸಮಾಧಾನ ಕೊಡುತ್ತಾನೆ.
ಆತನು ಶಾಂತಿ ಪ್ರಭು ಆಗಿದ್ದಾನೆ ಎಂದು ಹೇಳಿದರು. ವೇದಿಕೆಯ ಮೇಲೆ ಸಿಸ್ಟರ್ ನಳಿನಿ, ಉಲ್ಲಾಸ ಹದ್ದಣ್ಣವರ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸ್ತ್ರೋತ್ರ ಮತ್ತು ಪವ್ಯಿಯವರಿಂದ ಪ್ರಾರ್ಥನೆ ಗೀತೆ ಮೂಡಿಬಂದವು. ಕಾರ್ಯಕ್ರಮವನ್ನು ಬಾಲರಾಜ ಅರಬರ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಹಾಂತೇಶ ದೊಡ್ಡಮನಿ, ರಾಜು ದುಗ್ಗಾಣಿ, ಯಮನೂರ ಇರಕಲ್ಲ, ಮಾರುತಿ ಗೋಟೂರ, ಪರಶುರಾಮ ಅರಬರ, ಲಕ್ಷ್ಮಣ ಅರಬರ, ಮಂಜುಳಾ ಅರಬರ, ಕೆಂಚಪ್ಪ ಮ್ಯಾಗೇರಿ, ಕುಮಾರ ಕಮತರ, ಪ್ರವೀಣ ಬಡಿಗೇರ, ಲಕ್ಷ್ಮಣ ಕುರಿ, ದೇವು ನಾರಾಯಣಪುರ, ಪ್ರಶಾಂತ ಬಡಿಗೇರ, ಲೇಹಾ ಅರಬರ, ಬಸಮ್ಮ ಅರಬರ, ಯಮನಮ್ಮ ಅರಬರ, ಮಾಥರ್ಾ ಬಡಿಗೇರ, ಸಂಗೀತಾ ದೊಡ್ಡಮನಿ, ಪೂಜಾ ಗದಿಯವರ, ಆಶಾ ಗೋಟೂರ, ಕಾಳಪ್ಪ ಬಡಿಗೇರ, ಸೀಮಾ ನಿಡಗುಂದಿ ಹಾಗೂ ನ್ಯೂ ರೇಹೆಬೋತ್ ಚರ್ಚನ ಎಲ್ಲ ಕಾರ್ಯಕರ್ತರು ಭಾಗವಹಿಸಿದ್ದರು. ಕೊನೆಯಲ್ಲಿ ಒಬ್ಬರಿಗೊಬ್ಬರು ಸಿಹಿ ತಿನಿಸುವುದರ ಮೂಲಕ ಮುಖಾಂತರ ಮುಕ್ತಾಯವಾಯಿತು. ಯಶವಂತ. ಭಜಂತ್ರಿ ವಂದಿಸಿದರು.