ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚನೆ: ಶಿವಸೇನೆ ಟೀಕೆ

ಮುಂಬೈ, ಫೆ 06, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು  ಟ್ರಸ್ಟ್ ರಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಈ ವಿಷಯದ ಬಗ್ಗೆ ಶಿವಸೇನೆ ಬಿಜೆಪಿಯನ್ನು ಟೀಕಿಸಿದೆ  “ರಾಮಮಂದಿರ ಟ್ರಸ್ಟ್ ವಿಷಯವನ್ನು ರಾಜಕೀಯಗೊಳಿಸಲಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ  ಆದರೆ ಅದರ "ಅಡಿಪಾಯ" ವನ್ನು ದೆಹಲಿ ಚುನಾವಣೆಯಲ್ಲಿ ಇಡಲಾಗಿದೆ” ಎಂದು ಶಿವಸೇನಾ ಮುಖವಾಣಿ ಸಾಮ್ನಾ ಆಕ್ಷೇಪಿಸಿದೆ.ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯವನ್ನು ನಿರ್ಮಿಸಲು 15 ಸದಸ್ಯರ ಸ್ವಾಯತ್ತ ಟ್ರಸ್ಟ್ ರಚಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದ್ದರು. ''ದೆಹಲಿ ವಿಧಾನಸಭೆಯ ಮತದಾನಕ್ಕೆ ಕೇವಲ ನಾಲ್ಕು ದಿನಗಳ ಮುನ್ನ 'ಜೈ ಶ್ರೀ ರಾಮ್' ಘೋಷಣೆಯಾಗಿದು  ಶ್ರೀ ರಾಮನ  ಸಹಾಯದಿಂದ ಬಿಜೆಪಿ ಗೆಲುವಿನ ಸ್ಥಾನಳು ಎರಡು ಅಥವಾ ನಾಲ್ಕು ಏರಿದರೆ ಸಂತೋಷವಾಗುತ್ತದೆ ”ಎಂದು ಶಿವಸೇನೆಯ ಮುಖವಾಣಿ 'ಸಾಮನಾ' ಸಂಪಾದಕೀಯದಲ್ಲಿ ತಿಳಿಸಲಾಗಿದೆ. ರಾಮ್ ದೇವಾಲಯದ ವಿಷಯವನ್ನು ರಾಜಕೀಯಗೊಳಿಸಲಾಗುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು, ಆದರೆ ದೆಹಲಿ ವಿಧಾನಸಭಾ ಚುನಾವಣೆಗೆ ಅದರ 'ಅಡಿಪಾಯ' ಹಾಕಲಾಗುತ್ತಿದ್ದು, 2024 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪೂರ್ಣಗೊಳ್ಳಲಿದೆ.  ಆ ಹೊತ್ತಿಗೆ ದೇಶದಲ್ಲಿ "ರಾಮ ರಾಜ್ಯ" (ಕಲ್ಯಾಣ ರಾಜ್ಯ) ನಿಜವಾದ ಅರ್ಥದಲ್ಲಿ ಸಾಕಾರಗೊಳ್ಳುವ ನಿರೀಕ್ಷೆಯಿದೆ, "ಎಂದು ಮುಖವಾಣಿಯಲ್ಲಿ ಸೇರಿಸಲಾಗಿದೆ.