ವಾಷಿಂಗ್ಟನ್, ಮಾರ್ಚ್ 24, ಕರೋನ ಸೋಂಕಿನ ನಡುವೆಯೂ ದೇಶದ ಆರ್ಥಿಕತೆ ನೀರಿಕ್ಷೆ ಮಾಡಿರುವುದಕ್ಕಿಂತ ಮೂರು, ನಾಲ್ಕು ತಿಂಗಳ ಮೊದಲೆ ಚೇತರಿಕೆಯಾಗಲಿದೆ ಎಂಬ ವಿಶ್ವಾಸವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವ್ಯಕ್ತಪಡಿಸಿದ್ದಾರೆ ಅಮೇರಿಕಾ ಮತ್ತೆ ಮತ್ತು ಶೀಘ್ರದಲ್ಲೇ ವ್ಯವಹಾರಕ್ಕೆ ಮುಕ್ತವಾಗಲಿದೆ. ಮೂರು ಅಥವಾ ನಾಲ್ಕು ತಿಂಗಳುಗಳಿಗಿಂತಲೂ ಬೇಗ ಸುಧಾರಿಸಲಿದೆ ಎಂದರು.
ಸಾಕಷ್ಟು ಬೇಗ ಗುಣಪಡಿಸುವುದಕ್ಕಿಂತಲೂ ಸಮಸ್ಯೆಯು ಕೆಟ್ಟದಾಗಿದೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು. ಅಮೆರಿಕದ ಆರ್ಥಿಕತೆಯನ್ನು ಪುನಃ ತೆರೆಯುವ ಸಮಯದ ಬಗ್ಗೆ 15 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು ಕರೋನ ಸೋಂಕು ಆರ್ಥಿಕತೆಗೆ ಹೊಡೆತ ಕೊಟ್ಟರೂಕೈ ಮೀರಿ ಹೋಗಲು ಸರ್ಕಾರವು ಬಿಡುವುದಿಲ್ಲ ಎಂದು ಅವರು ಹೇಳಿದರು.ಕರೋನ ಪ್ರಕರಣವನ್ನು ದೀರ್ಘಕಾಲೀನ ಆರ್ಥಿಕ ಸಮಸ್ಯೆಯಾಗಿ ಪರಿವರ್ತಿಸಲು ಬಿಡುವುದಿಲ್ಲ ನಾವು ಅದನ್ನು ತ್ವರಿತವಾಗಿ ಸರಿಪಡಿಸುತ್ತಿದ್ದೇವೆ ದೇಶ ಹಿಂದೆಂದಿಗಿಂತಲೂ ಬಲವಾಗಿರುತ್ತದೆ ಎಂದರು. ಹೊಸದಾಗಿ ಪ್ರಯಾಣ ನಿಷೇಧ ಮಾಡುವ ಅಲೋಚನೆ ಸಹ ಮಾಡುತ್ತಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.