ಮೇ. 23ರಿಂದ ವಣ್ಣೂರ ಗ್ರಾಮದೇವಿಯರ ಜಾತ್ರಾ ಮಹೋತ್ಸವ

Vannur Grama Devi Jatra Mahotsava from May 23

ನೇಸರಗಿ 06: ಸಮೀಪದ ವಣ್ಣೂರ ಗ್ರಾಮದ ಗ್ರಾಮದೇವತೆಯರ ಜಾತ್ರಾ ಮಹೋತ್ಸವವು ದಿ. 23ರಿಂದ ದಿ. 31ರ ವರೆಗೆ ಅದ್ದೂರಿಯಾಗಿ ನೆರವೇರಲಿದೆ.  

ದಿವ್ಯ ಸಾನಿಧ್ಯವನ್ನು ಹಣಬರಹಟ್ಟಿಯ ಕೆಳದಿಮಠದ ಪಟ್ಟದ ದೇವರು ಬಸವಲಿಂಗ ಶಿವಾಚಾರ್ಯರು ವಹಿಸುವರು ಮತ್ತು ಜಾತ್ರಾ ಮಹೋತ್ಸವದಲ್ಲಿ ಮುರುಗೋಡ ದುರದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮಿಗಳು, ಮಲ್ಲಾಪೂರ ಕೆ ಎನ್ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಸಂಗೊಳ್ಳಿಯ ಗುರು ಸಂಸ್ಥಾನ ಮಠದ ಗುರುಲಿಂಗ ಶಿವಾಚಾರ್ಯರು, ತಾರೀಹಾಳ ಅಡವಿ ಸಿದ್ದೇಶ್ವರ ಮಠದ ಅಡಿವೇಶ ದೇವರು, ಸುತಗಟ್ಟಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಮೇ 23 ರಂದು ಬೆಳಿಗ್ಗೆ 8 ಘಂಟೆಗೆ ಗ್ರಾಮದ ಸುಮಂಗಲೆಯಂರಿಂದ ಬೃಹತ್ ಕುಂಭಮೇಳ ಆರತಿಯೊಂದಿಗೆ ಬರಮಾಡಿಕೊಳ್ಳುವದು, 9 ಘಂಟೆಗೆ ಹೋಮ, ಹವನ, ದೈವದ ವತಿಯಿಂದ ಉಡಿ ತುಂಬುವದು, ನಂತರ ಶ್ರೀಗಳ ಪ್ರವಚನ, ಮಹಾಪ್ರಸಾದ ನಡೆಯಲಿದೆ, ಅಂದು ರಾತ್ರಿ 10 ಘಂಟೆಗೆ ರೇಣುಕಾ ನಾಟ್ಯ ಸಂಘ ವಣ್ಣೂರ ಇವರಿಂದ ಬಡವನ ಒಡಿಲು ಬೆಂಕಿಯ ಸಿಡಿಲು ಎಂಬ ಸಾಮಾಜಿಕ ನಾಟಕ ನೆರವೇರಲಿದೆ. 

ಮೇ 24 ರಂದು ಬೆಳಿಗ್ಗೆ ಪೂಜೆ, ಬಾಬದಾರರು ಉಡಿ ತುಂಬುವದು ಸಂಜೆ 5 ಘಂಟೆಗೆ ದೇವಿಯರ ಮಹಾ ರಥೋತ್ಸವ ನಡೆಯಲಿದೆ, ರಾತ್ರಿ 10 ಘಂಟೆಗೆ ಚಿಪ್ಪಲಕಟ್ಟಿಯ ದುರ್ಗಾದೇವಿ ಹೆಣ್ಣುಮಕ್ಕಳ ಸಂಗ್ಯಾ ಬಾಳ್ಯಾ ನಾಟ್ಯ ಸಂಘ ಇವರಿಂದ ಸಂಗ್ಯಾ ಬಾಳ್ಯಾ ನಾಟಕ ನೆರವೇರಲಿದೆ. ಮೇ 25 ರಂದು ಪೂಜೆ, ಭಕ್ತರಿಂದ ಉಡಿ ತುಂಬುವದು, ರಾತ್ರಿ 10 ಘಂಟೆಗೆ ವಣ್ಣೂರ ಮಹರ್ಷಿ ವಾಲ್ಮೀಕಿ ನಾಟ್ಯ ಸಂಘದಿಂದ ರಾಜಧಾನಿಗೆ ಕಾಲಿಟ್ಟ ರೈತ ಅರ್ಥಾರ್ಥ ಹಸಿರು ಸೇನೆಯ ಹುಲಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.  

ಮೇ. 26 ರಂದು ಭಕ್ತರಿಂದ ಉಡಿ ತುಂಬುವದು, ಸಂಜೆ 4 ಘಂಟೆಗೆ ಭಾರಿ ಜಂಗಿ ಕುಸ್ತಿ ನಡೆಯಲಿವೆ. ಮೇ. 27 ರಂದು ಪೂಜೆ, ಉಡಿ ತುಂಬುವದು ಸಂಜೆ 4 ಘಂಟೆಗೆ ಜಂಗಿ ಕುಸ್ತಿ ನಡೆಯಲಿವೆ. ಮೇ 28 ರಂದು ಪೂಜೆ, ಸಂಜೆ 4 ಘಂಟೆಗೆ ಜಂಗಿ ಕುಸ್ತಿ,ರಾತ್ರಿ 10 ಘಂಟೆಗೆ ವಣ್ಣೂರ ಜೈ ಹನುಮನ ನಾಟ್ಯ ಸಂಘದಿಂದ ಸಾವಿರ ಹಳ್ಳಿಯ ಸರದಾರ ನಾಟಕ ನಡೆಯಲಿದೆ. ಮೇ 29 ರಂದು ಮಾಸ್ತಮರ್ಡಿ, ಸುನಕುಂಪಿ ಗ್ರಾಮಸ್ಥರಿಂದ ಉಡಿ ತುಂಬುವದು, ರಾತ್ರಿ 10 ಘಂಟೆಗೆ ಗ್ರಾಮದೇವಿ ನಾಟ್ಯಸಂಘ ವಣ್ಣೂರ ಇವರಿಂದ ಹುತ್ತದಲ್ಲಿ ಕೈ ಇಟ್ಟ ಮುತ್ತೈದೆ ಎಂಬ ಸಾಮಾಜಿಕ ನಾಟಕ ನಡೆಯಲಿದೆ.  

ಮೇ 30ಕ್ಕೆ ಪೂಜೆ ಸಂಜೆ 5 ಘಂಟೆಗೆ ಕೊನೆಯ ರಥೋತ್ಸವ ನೆರವೇರಲಿದೆ. ಮೇ 31 ರಂದು ದೇವಿಯರನ್ನು ಪೂಜೆಯೊಂದಿಗೆ ಗದ್ದಿಗೆ ಗೊಳಿಸುವದು ನಡೆಯಲಿದ್ದು, ಜಾತ್ರೆಯು ಪ್ರತಿ ದಿನ ಬಸವೇಶ್ವರ ದೇವಸ್ಥಾನದಲ್ಲಿ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೈಲಹೊಂಗಲ ಟಿಎಪಿಸಿಎಮ್‌ಎಸ್ ಅಧ್ಯಕ್ಷ, ವಣ್ಣೂರ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಮತ್ತು ಜಾತ್ರಾ ಕಮಿಟಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.