ಹಾನಗಲ್ 06 : ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಶಾಸಕ ಶ್ರೀನಿವಾಸ ಮಾನೆ ಉಪಚರಿಸಿ, ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದರು.
ತಾಲೂಕಿನ ಅಕ್ಕಿಆಲೂರಿನ ಕಲ್ಲಾಪುರ ಕ್ರಾಸ್ ಬಳಿ ಶಿರಸಿ-ಮೊಣಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಟಾಟಾ ಏಸಿ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಪದ್ಮರಾಜ್ ಹಾವೇರಿ (25), ಅರುಣ ಹಾವೇರಿ (23) ಮತ್ತು ಮಹೇಶ ಭಜಂತ್ರಿ (35) ಎಂಬುವರು ಗಾಯಗೊಂಡಿದ್ದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕ ಮಾನೆ ಗಾಯಾಳುಗಳನ್ನು ಸಂತೈಸಿ ಕೂಡಲೇ ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟು, ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಿದರು. ರಸ್ತೆ ಅಪಘಾತದ ಕಾರಣ ಕೆಲಕಾಲ ವಾಹನ ದಟ್ಟಣೆ ಹೆಚ್ಚಾಗಿತ್ತು. ತಮ್ಮ ಗನ್ಮ್ಯಾನ್ ಹಾಗೂ ಸ್ಥಳೀಯ ಮುಖಂಡರ ಮೂಲಕ ವಾತಾವರಣ ತಿಳಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಗಮನ ಸೆಳೆದರು.