ವಾಷಿಂಗ್ಟನ್, ಜೂನ್ 12, ಅಮೆರಿಕ ಪೊಲೀಸ ವ್ಯವಸ್ಥೆಯನ್ನು ಕಾಲಕ್ಕೆ ತಕ್ಕಂತೆ ಬಲಪಡಿಸಬೇಕಾದ, ಸುಧಾರಣೆ ಮಾಡಬೇಕಾದ ಅಗತ್ಯವಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಟೆಕ್ಸಾಸ್ ರಾಜ್ಯದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ. ಆಫ್ರಿಕನ್ ನಿವಾಸಿ ಜಾರ್ಜ್ ಫ್ಲಾಯ್ಡ್ ಅವರನ್ನು ಪೊಲೀಸರು ಹತ್ಯೆಗೈದ ಕಾರಣ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆಯೇ ಶೀಘ್ರದಲ್ಲೇ ಹೊಸ ಕಾನೂನು ಜಾರಿ, ಸುಧಾರಣೆಗಳನ್ನು ತರಬೇಕಿದೆ ಎಂದು ಹೇಳಿದರು. "ನಾವು ಬಲವಾದ ಪೊಲೀಸ್ ಪಡೆಗಳನ್ನು ಹೊಂದಬೇಕಿದೆ ಏಕೆಂದರೆ ಅದು ನಮಗೆ ಬಹಳ ಅಗತ್ಯವಾಗಿದೆ ಎಂದೂ ಟ್ರಂಪ್ ಗುರುವಾರ ಹೇಳಿದರು.ಮಿನ್ನಿಯಾಪೋಲಿಸ್ ನಗರವು ಫ್ಲಾಯ್ಡ್ ವಿರುದ್ಧದ ಇತ್ತೀಚಿನ ಪ್ರತಿಭಟನೆಯ ಸಮಯದಲ್ಲಿ "ಮೂರು ರಾತ್ರಿಗಳ ನರಕ ಕಂಡಿದೆ ಹೀಗಾಗಿ ಹೊಸ ಸುಧಾರಣೆ ಬೇಕಿದೆ ಎಂದರು. ಈ ನಡುವೆ ಜನಸಂದಣಿಯನ್ನು ಚದುರಿಸಲು ಅಶ್ರುವಾಯು ಮತ್ತು ಇತರ ಹಿಂಸಾತ್ಮಕ ತಂತ್ರಗಳನ್ನು ಬಳಸದಂತೆ ಕಾನೂನು ಜಾರಿ ಅಧಿಕಾರಿಗಳಿಗೆ ಆದೇಶಿಸಲಾಗಿದೆ.