ಮಾಸ್ಕೋ, ನ 6: ಎಂಜಿನ್ವೊಂದರಲ್ಲಿ ತಾಂತ್ರಿಕ ತೊಂದರೆಯಿಂದ ಬೋಯಿಂಗ್ -777 ವಿಮಾನ ಇಲ್ಲಿನ ಶೆರೆಮೆಟಿಯೊವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುತರ್ಾಗಿ ಇಳಿದಿದೆ ಎಂದು ರಷ್ಯಾ ತುರ್ತು ಸೇವೆಗಳ ಪ್ರತಿನಿಧಿಯೊಬ್ಬರು ಸ್ಪಟ್ನಿಕ್ಗೆ ಇಂದು ತಿಳಿಸಿದ್ದಾರೆ. 'ಮಾಸ್ಕೋದಿಂದ ಪಂಟಾ ಕಾನಾ (ಡೊಮಿನಿಕನ್ ರಿಪಬ್ಲಿಕ್) ಗೆ ತೆರಳುತ್ತಿದ್ದ 7571 ಸಂಖ್ಯೆಯ ಬೋಯಿಂಗ್ 777 ವಿಮಾನ ಶೆರೆಮೆಟಿಯೆವೊ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ' ಎಂದು ವಕ್ತಾರರು ತಿಳಿಸಿದ್ದಾರೆ. ವಕ್ತಾರರ ಪ್ರಕಾರ, ವಿಮಾನ ಹೊರಟ ಸ್ವಲ್ಪ ಹೊತ್ತಿನಲ್ಲೇ ಒಂದು ಎಂಜಿನ್ನಲ್ಲಿನ ತೈಲ ಒತ್ತಡ ಸಂವೇದಕ ನಿಷ್ಕ್ರಿಯವಾಗಿತ್ತು. . ಪ್ರಾಥಮಿಕ ಮಾಹಿತಿಯಂತೆ ವಿಮಾನದಲ್ಲಿ 488 ಜನರಿದ್ದರು. ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ತುರ್ತು ಸೇವೆಗಳ ಪ್ರತಿನಿಧಿಯೂ ತಿಳಿಸಿದ್ದಾರೆ.