ಲೋಕದರ್ಶನ ವರದಿ
ಸವದತ್ತಿ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ ಬಿಜೆಪಿ ಪಕ್ಷದಿಂದ 12 ಸ್ಥಾನಗಳಲ್ಲಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಸವದತ್ತಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವದ ಸಂಭ್ರಮ ಆಚರಿಸಿದರು.
ತಾಲೂಕು ಅಧ್ಕಕ್ಷ ಸುನೀಲ ಸುಳ್ಳದ ಮತ್ತು ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಸುಭದ್ರಗೊಳಿಸಲು ಮತದಾರರು ಉಪಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡಿದ್ದಾರೆ ಎಂದರು. ರಾಜ್ಯದಲ್ಲಿ ಅಭಿವೃದ್ದಿ ಮಾಡಲು ಮತ್ತೇ ಸರಕಾರಕ್ಕೆ ಚೇತನ ಮೂಡಿದಂತಾಗಿದೆ ಎಂದರು.
ಎಪಿಎಮ್ಸಿ ಅಧ್ಯಕ್ಷ ಜಗದೀಶ ಹನಸಿ, ನರಸಿಂಹ ಕುಲಕಣರ್ಿ, ಅಜರ್ುನ ಅಮ್ಮೋಜಿ, ಯಲ್ಲಪ್ಪ ರುದ್ರಾಕ್ಷಿ, ಕುಮಾರಸ್ವಾಮಿ ತಲ್ಲೂರಮಠ, ವೀರೇಂದ್ರ ಪ್ರಭುನವರ, ವಿನಾಯಕ ಜಾನ್ವೇಕರ, ಉಮೇಶ ಪೆಂಟದ, ರಾಜು ಸಾಲಿಮಠ, ಸಂಪತಸಿಂಗ್ ರಜಪುತ, ಶರಣು ಮೇಟಿ, ರಮೇಶ ಗೊರಗುದ್ದಿ, ಸಂಗಯ್ಯ ಸಾಲಿಮಠ, ನೀಲಪ್ಪ ಬರಗಾಲ ಇತರರು ಉಪಸ್ಥಿತರಿದ್ದರು.