ಬ್ಯಾಡಗಿ05: ಮತದಾರರ ಲಿಂಗಾನುಪಾತ ವ್ಯತ್ಯಾಸ ಸರಿಪಡಿಸಿ ಪರಿಷ್ಕೃತ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಐ.ಎ.ಎಸ್.ಅಧಿಕಾರಿ ತ್ರಿಲೋಕಚಂದ್ರ ಅವರು ಸೂಚಿಸಿದರು.
ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಉಪವಿಭಾಗಾಧಿಕಾರಿಗಳು, ತಹಶೀಲ್ದಾರಗಳ ಸಭೆ ನಡೆಸಿದ ಅವರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸಾರ್ವಜನಿಕರಿಂದ ಸ್ವೀಕರಿಸಿದ ಅಜರ್ಿಗಳನ್ನು ತ್ವರಿತವಾಗಿ ವಿಲೇಗೊಳಿಸಬೇಕು. ಜನ್ಮ ದೃಡೀಕರಣ ದಾಖಲೆ ಇತರ ಕಾರಣಗಳಿಗಾಗಿ ಬಾಕಿ ಉಳಿಸಿಕೊಂಡರೆ ಅಂತಹ ಬಿಎಲ್ಓ ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದ ಅಧಿಕಾರಿಗಳಿಗೆ ಸೂಚಿಸಿದ ಅವರು ಲಿಂಗಾನುಪಾತ ವ್ಯತ್ಯಯವಿರುವ ಬೂತ್ಗಳಿಗೆ ಖುದ್ದಾಗಿ ಭೇಟಿ ನೀಡಿ, ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಕಡಿಮೆ ನೊಂದಣಿಗೆ ಕಾರಣಗಳನ್ನು ಗುರುತಿಸಿ ಅರ್ಹರಾದ ಯಾವುದೇ ಮಹಿಳಾ ಮತದಾರರು ಹಾಗೂ ಯುವ ಸಮೂಹ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮವಹಿಸಲು ತಿಳಿಸಿದರು.
2011ರ ಜನಗಣತಿಯ ಲಿಂಗಾನುಪಾತ ಹಾಗೂ ಪ್ರಸ್ತುತ ಅಂಗನವಾಡಿ ಹಾಗೂ ಶಾಲೆಗಳಲ್ಲಿರುವ 0 ರಿಂದ ಆರು ವರ್ಷ, ಆರರಿಂದ 18 ವರ್ಷದವರ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಬೇಕು. ಲಿಂಗಾನುಪಾತದ ವ್ಯತ್ಯಯವನ್ನು ವಿಶ್ಲೇಷಿಸಿ. ಮತದಾರರಾಗಿ ನೊಂದಾಯಿಸಿಕೊಳ್ಳದೇ ಇರುವ ಮಹಿಳಾ ಮತದಾರರನ್ನು ನೊಂದಣಿಗೆ ಕ್ರಮವಹಿಸಿ. ಪ್ರತಿ ವಾರಕ್ಕೊಮ್ಮೆ ಬೂತ್ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಕನಿಷ್ಠ 36 ರಿಂದ 40 ಸಾವಿರ ಮಹಿಳೆಯರು ಮತದಾರರಾಗಿ ನೋಂದಾಯಿಸದೇ ಇರುವುದು ಅಂದಾಜಿಸಲಾಗಿದೆ. ಮಹಿಳೆಯರು ಕಡಿಮೆ ನೊಂದಣಿಯಾಗಿರುವ ಮತಗಟ್ಟೆವಾರು ವಾಸ್ತವ ದತ್ತಾಂಶಗಳನ್ನು ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ನೊಂದಾಯಿಸದೇ ಉಳಿದುಕೊಂಡಿರುವ ಮಹಿಳಾ ಮತದಾರರ ಮನವೊಲಿಸಿ ಪಟ್ಟಿಗೆ ಸೇರ್ಪಡೆ ಗೊಳಿಸಬೇಕು. ಬೇರೆ ಮತಕ್ಷೇತ್ರದಿಂದ ಮದುವೆಯಾಗಿ ಗಂಡನ ಮನೆಗೆ ಬಂದಿರುವ ಮತದಾರರು ವಾಸವಿರುವ ಮತಗಟ್ಟೆಯಲ್ಲಿ ನೊಂದಾಯಿಸಿಕೊಳ್ಳದೇ ಹೊರಗುಳಿದಿದ್ದಾರೆ. ಇಂತಹವನ್ನು ಪತ್ತೆಮಾಡಿ ನೊಂದಾಯಿಸಿಕೊಳ್ಳುವ ಕಾರ್ಯ ನಡೆಡಿದೆ. ಅಜರ್ಿ ನಮೂನೆ-6ನ್ನು ಭತರ್ಿಮಾಡಿ ಮಹಿಳೆಯರನ್ನು ನೊಂದಾಯಿಕೊಳ್ಳಲು ಸೂಚಿಸಲಾಗಿದೆ. ಕೆಲವು ಮತಗಟ್ಟೆ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದ ಹೆಣ್ಣು ಮಕ್ಕಳನ್ನು ಮತದಾರರ ಪಟ್ಟಿಗೆ ಸೇರಿಸದೇ ಉದಾಸೀನ ಭಾವನೆ ಪೋಷಕರಲ್ಲಿದೆ, ಇಂತಹವರ ಮನವೊಲಿಸಿ ಮತದಾರರ ಪಟ್ಟಿಗೆ ಸೇರಿಸುವ ಕಾರ್ಯ, ಕೆಲವೆಡೆ ಮೃತರಾಗಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಉಳಿದಿರುವ ಪ್ರಕರಣಗಳನ್ನು ಪತ್ತೆಮಾಡಿ ಪರಿಷ್ಕರಿಸುವ ಕಾರ್ಯ ನಡೆದಿದೆ ಎಂದು ವಿವರಿಸಿದರು.
ಮತದಾರರ ಪಟ್ಟಿ ಬಗ್ಗೆ ದೂರುಗಳು ಹಾಗೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ತಾಲೂಕಿನ ಪ್ರತಿ ಮತಗಟ್ಟೆಗೂ ಬೂತ್ ಮಟ್ಟದ ಏಜೆಂಟರುಗಳನ್ನು ನೇಮಕ ಮಾಡುವಂತೆ ಪಕ್ಷದ ಮುಖಂಡರಿಗೆ ಸಲಹೆ ನೀಡಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ಪಕ್ಷದ ಮುಖಂಡರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲ. ಮತಗಟ್ಟೆವಾರು ಏಜೆಂಟರುಗಳ ನೇಮಕ ಮಾಡಲಾಗುತ್ತಿದೆ ಎಂದು ಹೇಳಿದರು.
ಸಭೆಗೂ ಮುನ್ನ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಐ.ಎ.ಎಸ್.ಅಧಿಕಾರಿ ತ್ರಿಲೋಕಚಂದ್ರ ಅವರು ತಾಲೂಕಿನ ಮೊಟೇಬೆನ್ನೂರು ಗ್ರಾಮದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹಾವೇರಿ ಉಪವಿಭಾಗಾಧಿಕಾರಿ ಡಾ.ತಿಪ್ಪೇಸ್ವಾಮಿ, ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ತಹಶೀಲ್ದಾರ ಶರಣಮ್ಮ ಕಾರಿ, ಚುನಾವಣಾ ಶಿರಸ್ತೇದಾರ ಆರ್. ಎಂ. ಮುಗಳಿ, ತಾಲೂಕಾ ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದಶರ್ಿ ರಮೇಶ ಸುತ್ತಕೋಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.