ಸಂಶೋಧಕ ಲೂಯಿಸ್ ಬ್ರೈಲ್ ಅವರ ಜನ್ಮದಿನ ನಿಮಿತ್ತ ಸನ್ಮಾನ
Tribute to inventor Louis Braille on his birthday
ಹುಬ್ಬಳ್ಳಿ 13: ಜಾಗತಿಕವಾಗಿ ದೃಷ್ಟಿದೋಷ ಹೊಂದಿರುವವರನ್ನು ಸಶಕ್ತಗೊಳಿಸುವ ಲಿಪಿಯನ್ನು ಕಂಡು ಹಿಡಿದ, ಬ್ರೈಲ್ ಲಿಪಿಯ ಸಂಶೋಧಕ ಲೂಯಿಸ್ ಬ್ರೈಲ್ ಅವರ ಜನ್ಮದಿನ ನಿಮಿತ್ತ ಸಕ್ಷಮ ಉತ್ತರ ಪ್ರಾಂತ್ಯದ ಅಧ್ಯಕ್ಷ,, ವೈದ್ಯರಾದ ಡಾ. ಸುನೀಲ ಗೋಕಲೆ, ಡಾ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ರಾಷ್ಟ್ರೀಯ ಯುವ ಪ್ರಶಸ್ತಿ 2025 ಪುರಸ್ಕೃತ, ತಬಲಾ ಕಲಾವಿದ ಡಾ ನಾಗಲಿಂಗ ಮೂರಗಿ, ಹುಬ್ಬಳ್ಳಿ ವಕೀಲರ ಸಂಘದ ಚುನಾವಣೆ ಯಲ್ಲಿ ಖಜಾಂಚಿಯಾಗಿ ಆಯ್ಕೆ ಯಾದ ಸವಿತಾ ಪಾಟೀಲ್ ಅವರಿಗೆ ಸಮಿತಿಯ ಸದಸ್ಯರು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ್ಣ ಮಾಡಿ ಗೌರವ ಪೂರ್ವಕವಾಗಿ ಆತ್ಮೀಯವಾಗಿ ಪ್ರೀತಿಯಿಂದ ಗೌರವಿಸಲಾಯಿತು.
ಅವರು ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಶುಭಾಶಯಗಳನ್ನು ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷರು, ಸಾಹಿತಿ ಪ್ರೊ ಎಸ್.ಎಂ.ಸಾತ್ಮಾರ, ಅವರು ಮಾತನಾಡಿದರು. ಕಾರ್ಯಕ್ರಮ ಸಂಯೋಜಕ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸ್ವಾಗತಿಸಿ, ನಿರೂಪಿಸಿದರು.
ಸಕ್ಷಮ ಉತ್ತರ ಪ್ರಾಂತ್ಯದ ಅಧ್ಯಕ್ಷ, ಕಿಮ್ಸ ನಿವೃತ್ತ ಪ್ರಾಧ್ಯಾಪಕ ಡಾ. ಸುನೀಲ ಗೋಕಲೆ ಅವರು ಮಾತನಾಡಿ ಲೂಯಿಸ್ ಬ್ರೈಲ್ ಅವರ ಸಾಧನೆ, ಬ್ರೈಲ್ ಲಿಪಿಯ ಮಹತ್ವವನ್ನು ತಿಳಿಸಿಕೊಟ್ಟರು. ಬ್ರೈಲ್ ಲಿಪಿಯು ಅಂಧರ ಸಂವಹನಕ್ಕಾಗಿ ಒಳಗೊಂಡಿರುವ ಸಾಧನ. ದೃಷ್ಟಹೀನರನ್ನು ಸಬಲೀಕರಣಗೊಳಿಸುತ್ತದೆ ಅಂಧರು. ಬ್ರೈಲ್ ಲಿಪಿಯ ಪ್ರಯೋಜನ ಪಡೆದು ಉತ್ತಮ ಸಂವಹನ ಮಾಡುವುದರ ಮೂಲಕ ಉತ್ತಮ ಜೀವನ ಸಾಗಿಸಬೇಕು ಎಂದರು. ಶಿವರುದ್ರ ಟ್ರಸ್ಟ್ ನ, ಆಯುರ್ವೇದ ವೈದ್ಯ ಡಾ ಬಸವಕುಮಾರ ತಲವಾಯಿ, ಚೆನ್ನಬಸಪ್ಪ ಧಾರವಾಡಶೆಟ್ಟರ, ವಕೀಲರಾದ ಸುವರ್ಣಾ ಪೊಲೀಸಪಾಟೀಲ್ , ಗುರುರಾಜ್ ಬಡಿಗೇರ್, ಸ್ವಪ್ನಾಲಿ ಪವಾರ್, ಸಂತೋಷ ರೆಡ್ಡಿ, ಶಕುಂತಲಾ ಬಾಳಿಗೇರಿ,ಮುಂತಾದವರು ಇದ್ದರು.ಞ
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 