ಸಿಂದಗಿ ತಾಪಂ ಇಒ ರಾಮು ಅಗ್ನಿಗೆ ಸನ್ಮಾನ

ಸಿಂದಗಿ ತಾಪಂ ಇಒ ರಾಮು ಅಗ್ನಿಗೆ ಸನ್ಮಾನ Tribute to Sindagi TAP EO Ramu Agni


ಸಿಂದಗಿ 03: ತಾಲೂಕಿನ ಯಂಕಂಚಿಯ ಸಂತೋಷ ತಳಗೇರಿ, ಸುಂಗಠಾಣದ ಲಾಳೇಮಶ್ಯಾಕ ಕುರುಬತಹಳ್ಳಿ, ಬ್ಯಾಕೋಡದ ಮಡಿವಾಳಪ್ಪ ಕೊಂಡಗೂಳಿ, ಚಾಂದಕವಟೆಯ ಮಲಕಪ್ಪ ಭಂಟನೂರ ಇವರುಗಳ ಗ್ರಾಪಂ ವ್ಯಾಪ್ತಿಯಲ್ಲಿ ಶೇ.100ಕ್ಕೆ 100ರಷ್ಟು ತೆರಿಗೆ ವಸೂಲಾತಿ ಸಾಧನೆ ಮಾಡಿದ್ದ ಪ್ರಯುಕ್ತ ಜಿಲ್ಲಾ ಪಂಚಾಯತ್ ಸಿಇಒ ರಿಷಿ ಆನಂದ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ತಾಪಂ ಇಒ ರಾಮು ಅಗ್ನಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಪ್ರಮಾಣ ಪತ್ರ ವಿತರಣೆ ಮಾಡಿದರು.