ಕೋಪ ತಾಪ ತೊರೆದು ಸಮಾಧಾನಿಯಾಗಿರಬೇಕು : ಪ್ರೊ.ಬಿ.ಎಮ್‌.ಹಿರೇಮಠ

ಕೋಪ ತಾಪ ತೊರೆದು ಸಮಾಧಾನಿಯಾಗಿರಬೇಕು : ಪ್ರೊ.ಬಿ.ಎಮ್‌.ಹಿರೇಮಠ  One should let go of anger and be calm: Prof. B.M. Hiremath

ಲೋಕದರ್ಶನ ವರದಿ  

ಮುದ್ದೇಬಿಹಾಳ:- ಕೋಪ ತಾಪ ತೊರೆದು ಸಮಾಧಾನಿಯಾಗಿರಬೇಕು .ಅಂದರೆ ಮಾತ್ರ ಮನೆಯವರ ಪ್ರೀತಿ ಅನುಂಪ ದೊರಕಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಮ್‌.ಹಿರೇಮಠ ಹೇಳಿದರು.  ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಇರುವ ನೌಕರ ಭವನದಲ್ಲಿ ನಡೆದ ಸರಕಾರಿ ನಿವೃತ್ತ ನೌಕರರ ಸಂಘ ಆಯೋಜಿಸಿದ್ದ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ  ಪದಗ್ರಹಣ, ನಿಕಟಪೂರ್ವ ಪದಾಧಿಕಾರಿಗಳನ್ನು ಗೌರವಿಸಿ ಬೀಳ್ಕೊಡುವ ಮತ್ತು ಮಾಸಿಕ ಸಭೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಹಕ್ಕೆ ವಯಸ್ಸಾದಂತೆ,ಅಂಗಾಂಗಳಲ್ಲಿ ಶಕ್ತಿ ಕುಂದಿ,ಚೈತನ್ಯ ಬತ್ತಲು ಪ್ರಾರಂಭಿಸುತ್ತೆದೆ ಇಂತಹ ಅವಸ್ಥೆಯಲ್ಲಿ ಮಕ್ಕಳು ಹಾಗೂ ಸೊಸೆಯಂದಿರ ಆಸರೆ ಅವಶ್ಯವಾಗಿ ಬೇಕೇ ಬೇಕಾಗುತ್ತೆ.

ಇಂತಹ ಕಷ್ಟಕರ ಸಂದರ್ಭದಲ್ಲಿ ಮನೆಯವರು ಒಂದು ಮಾತು ಅಂದರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೇ ತಾಳ್ಮೆಯಿಂದ ಸಹಿಸಿಕೊಂಡು ಹೋಗಬೇಕು.ಇಲ್ಲದಿದ್ದರೆ  ಬದುಕು ದುಸ್ತರವಾಗುತದೆ.ಇಂದಿನ ಪೀಳಿಗೆಗೆ ಹಿರಿಯರ ಕಷ್ಟ-ಸುಖದ ಮಾತುಗಳನ್ನೂ ಸಹಿತ ಕೇಳಲು ಸಮಾಧಾನವಿಲ್ಲ.ಅಂತಲೇ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಹತ್ತಿವೆ ಎಂದು ನುಡಿದರಲ್ಲದೇ ಸಮರ್ಥಶಾಲಿಯೂ,ಸಾಹಿತಿಯೂ ಆದ ಅಶೋಕ ಮಣಿಯವರನ್ನು ನೀವು ಅಧ್ಯಕ್ಷನನ್ನಾಗಿ ಹಾಗೂ ಕ್ರಿಯಾಶೀಲತೆಗೆ ಹೆಸರಾದ ಎಸ್‌.ಎ.ಬೇವಿನಗಿಡದವರನ್ನು ಪ್ರಧಾನ ಕಾರ್ಯದರ್ಶಿಯಾಗಿ,ಬಿ.ಎಚ್‌.ಬಳಬಟ್ಟಿಯವರನ್ನು ಕೋಶಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡು ನೂತನವಾಗಿ ಪದಾಧಿಕಾರಿಗಳ ತಂಡವನ್ನು ರಚಿಸಿದ್ದೀರಿ,ಅವರೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ ಎಂದರು.  

ಇನ್ನೋರ್ವ ಮುಖ್ಯ ಅತಿಥಿ,ತಾಳಿಕೋಟೆಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಮ್‌.ಹಿರೇಮಠ ಮಾತನಾಡಿ,ಮುಪ್ಪು ಬಂದಾಗ ಗಪ್ಪನೇ ಇರಬೇಕು,ತಾಳ್ಮೆ ಕಳೆದುಕೊಂಡು ನಾಲಿಗೆಯನ್ನು ಹರಿಬಿಟ್ಟರೆ ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಗಿ,ಬೀದಿಪಾಲಾಗ ಬೇಕಾದೀತು ಎಂದು ಹೇಳಿದರು.ಸಂಘದ ನಿಕಟಪೂರ್ವ ಅಧ್ಯಕ್ಷ  ಎಮ್‌.ವ್ಹಿ.ಮಾಟಲದಿನ್ನಿ ಮಾತನಾಡಿ,ತಮ್ಮ ಅಧಿಕಾರಾವಧಿಯಲ್ಲಿ  ನೋವು-ನಲಿವುಗಳನ್ನು ಹಂಚಿಕೊಂಡು,ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಸಂಘದ ನೂತನ ಅಧ್ಯಕ್ಷ, ಹಿರಿಯ ಸಾಹಿತಿ ಅಶೋಕ ಮಣಿ ಮಾತನಾಡಿ,ಸಂಘ ಇರುವುದು ನಿವೃತ್ತ ನೌಕರರ ಹಿತಕಾಪಾಡಲು.ಇಲಾಖೆಗಳಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳು ತಮಗೆ ಬಂದರೆ ನಮ್ಮನ್ನು ಸಂಪರ್ಕಿಸಿರಿ,ಆ ಸಮಸ್ಯೆಗಳನ್ನು ನೀಗಿಸಲು   ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು.ಹಿರಿಯ ನಾಗರಿಕರಿಗೆ ರಿಯಾಯತಿ ದರದಲ್ಲಿ  ರೇಲ್ವೆಗಳಲ್ಲಿಪ್ರಯಾಣಿಸಲು  ಹಿಂದೆ ವ್ಯವಸ್ಥೆ ಮಾಡಲಾಗಿತ್ತು,ಆದರೆ ಇಂದು ಅದನ್ನು ಸ್ಥಗಿತ ಗೊಳಿಸಿದ್ದಾರೆ,ಅದನ್ನು ಮತ್ತೆ ಪುನರಾಂಭಿಸಲು, ಸಂಘವು ಸಂಬಂಧಿಸಿದ ಇಲಾಖೆ ಹಾಗೂ ಸಚಿವಾಲಯಕ್ಕೆ ಮನವಿ ಪತ್ರ ಸಲ್ಲಿಸುತ್ತದೆ ಮತ್ತು ತಾಲೂಕಿನ ಎಲ್ಲಾ ಇಲಾಖೆಗಳ ಕಛೇರಿಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಕೌಂಟರ್ ಗಳನ್ನು ತೆರೆಯುವಂತೆ ಹಾಗೂ ಅವರಿಗಾಗಿಯೇ ಕುಳಿತುಕೊಳ್ಳಲು ಪ್ರತ್ಯೇಕವಾದ ಆಸನದ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿ,ಆ ನಿಟ್ಟಿನಲ್ಲಿ ಕಾರ್ಯ ಕಾರ್ಯೋಣ್ಮಮುಖವಾಗುವುದು ಎಂದು ಭರವಸೆ ನೀಡಿದರು.