ವಿಶ್ವ ಕಾರ್ಮಿಕ ದಿನ ವಿಶಿಷ್ಟ ರೀತಿಯಲ್ಲಿ ಆಚರಣೆ

ವಿಶ್ವ ಕಾರ್ಮಿಕ ದಿನ ವಿಶಿಷ್ಟ ರೀತಿಯಲ್ಲಿ ಆಚರಣೆ  World Labor Day celebrated in a unique way

ತಾಳಿಕೋಟಿ 01: ಪಟ್ಟಣದ ನಿವೃತ್ತ ಶಿಕ್ಷಕ ಜಿ.ಎಸ್‌.ಜಮ್ಮಲದಿನ್ನಿ ದಂಪತಿಗಳು ತಮ್ಮ 40ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ.  

ಶುಕ್ರವಾರ ವಿಶ್ವ ಕಾರ್ಮಿಕ ದಿನದಂದೇ ತಮ್ಮ 40ನೇ ವಿವಾಹ ವಾರ್ಷಿಕೋತ್ಸವ ಕೂಡಿ ಬಂದಿರುವುದರಿಂದ ಈ ಮಹತ್ವದ ದಿನವನ್ನು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷಿ ಕಾರ್ಮಿಕರು ಪೌರಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸುವುದರೊಂದಿಗೆ ಈ ಕ್ಷೇತ್ರದ ಎಂಟು ಜನ ಕಾಯಕಯೋಗಿಗಳನ್ನು ತಮ್ಮ ಮನೆಗೆ ಆಮಂತ್ರಿಸಿ ಅವರನ್ನು ಗೌರವಿಸಿ ಸನ್ಮಾನಿಸಿದ್ದಾರೆ. ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಜಮ್ಮಲದಿನ್ನಿಯವರು ಸಮಾಜದಲ್ಲಿ ಇತರರಿಗೂ ಮಾದರಿಯಾಗಿದ್ದಾರೆ.  

ಕಾರ್ಯಕ್ರಮದಲ್ಲಿ ಸನ್ಮಾನಿತಗೊಂಡಿರುವ ಕಾರ್ಮಿಕರು ಅವರ ವಾರ್ಷಿಕೋತ್ಸವಕ್ಕೆ ಶುಭ ಕೋರುವುದರೊಂದಿಗೆ ಅವರ ಆಯುಷ್ಯ ಆರೋಗ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.