108 ಕ್ಕಿಂತ ಹೆಚ್ಚು ಬಾರಿ ಗುಜರಾತದ ಗಿರಿನಾರ ದತ್ತ ಚರಣ ಪಾದುಕಾ ದರ್ಶನ ಪಡೆದ ಸಾಧಕರಿಗೆ ಸನ್ಮಾನ ಸಮಾರಂಭ
ಧಾರವಾಡ 03 : ಗಿರಿನಾರಭಾರತ ಅನೇಕ ಪುಣ್ಯಕ್ಷೇತ್ರಗಳ ಬೀಡಾಗಿದೆ. ಗಿರಿನಾರ ಗುಜರಾತ ರಾಜ್ಯದ ಜುನಾಗಡ ಸಮೀಪದ ಶಿಖರ. ಇದನ್ನು ರೇವತ ಪರ್ವತ ಎಂದೂ ಕರೆಯುತ್ತಾರೆ.ಹಿಮಾಲಯ ಪರ್ವತಕ್ಕಿಂತಲೂ ಹಳೆಯದು.ಅತ್ರಿ ಮುನಿ ಹಾಗು ಸತಿ ಅನುಷೂಯ ಸುಮಾರು 25 ವರ್ಷಗಳ ಕಾಲ ಇಲ್ಲಿ ಇದ್ದು ತಪಸ್ಸು ಮಾಡಿದ್ದರು ಎಂಬ ಐತಿಹ್ಯ ಇದೆ. ದತ್ತ ಚರಣ (ಪಾದುಕಾ) ದರ್ಶನ ಶಿಖರದ ತುತ್ತ ತುದಿಯ ಮೇಲೆ ಇದೆ. ಇಲ್ಲಿಗೆ ತಲುಪಲು 9999 ಮೆಟ್ಟಲುಗಳನ್ನು ಏರಿ ಹೋಗಬೇಕು ಎಂದು 108 ಕ್ಕಿಂತಲು ಹೆಚ್ಚುಬಾರಿ ಶಿಖರ ಎರಿ ದರ್ಶನ ಪಡೆದ ಹೂಗಾರದ ದತ್ತಾ ಮಾಳಿ ಹೇಳಿದರು. ಅವರು ಧಾರವಾಡ ದತ್ತ ಪಾದಯಾತ್ರಾ ಸಮಿತಿ, ಹಾಗೂ ವಾಳ್ವೇಕರ ಪರಿವಾರ ಇವರ ಸಂಯುಕ್ತಾಶ್ರಯದಲ್ಲಿ ಗಿರಿನಾರ (ಶ್ರೀ ದತ್ತ) ಸತ್ಸಂಗ ಕಾರ್ಯಕ್ರಮದಲ್ಲಿ ನೆರೆದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಇದೇ ಶಿಖರ ಪ್ರದೇಶದಲ್ಲಿ (ನೇಮಿನಾಥ) ದಿಗಂಬರ ಜೈನರ ಪವಿತ್ರ ಮಂದಿರಗಳು ಇವೆ,ಅದೇರೀತಿ ಅಂಬಾ ಮಾತಾ ,,ಗೋರಕ್ಷನಾಥ ,ಹನುಮಾನ, ,ಕಾಳಭೈರವ ನಾಥ, ಇನ್ನೂ ಹಲವು ಮಂದಿರಗಳು ಇವೆ ಎಂದರು. ದತ್ತ ಮಂದಿರ ಸಮೀಪ ಕಮಂಡಲು ಕುಂಡ ( ಧುನ) ಇದ್ದು ಬಂದವರಿಗೆಲ್ಲ ಸದಾಕಾಲ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ.ಈ ಪ್ರದೇಶದಲ್ಲಿ 33 ಕೋಟಿ ದೇವತೆಗಳು ವಾಸಿಸುತ್ತಿದ್ದಾರೆ ಎಂಬ ನಂಬಿಕೆ ಇಟ್ಟು ಕಾರ್ತೀಕ ಮಾಸದ ಏಕಾದಶಿಯಿಂದ ಕಾರ್ತಿಕ ಹುಣ್ಣಿಮೆ ದಿನ ವರೆಗೆ 5 ದಿನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಸುಮಾರು 36 ಕಿ ಮಿ ಸುತ್ತು ಪರಿಕ್ರಮ ಹಾಕುತ್ತಾರೆ.ಶಿವರಾತ್ರಿಯಂದು ನಾಗಾಸಾಧುಗಳು ಇಲ್ಲಿ ದೊಡ್ಡ ಜಾತ್ರೆ ಉತ್ಸವ ನಡೆಸುತ್ತಾರೆ. ಒಮ್ಮೆ ಆದರೂ ಈ ದತ್ತ ಚರಣ (ಪಾದುಕಾ) ನೋಡುವ ಭಾಗ್ಯ ನಿಮ್ಮದಾಗಲಿ ಎಂದರು. ಇನ್ನೂರ್ವ ಅತಿಥಿ ದತ್ತನ ಉಪಾಸಕರು ಆದ ಬೆಳಗಾವಿಯ ಶ್ರೀ ರಾವಜೀ (ಉದಯ) ದೇಶಪಾಂಡೆ. ಇವರು ಇಂದಿಗೆ 66 ಬಾರಿ ಗಿರಿನಾರ ಪವ9ತ ಹತ್ತಿ ಶ್ರೀ ದತ್ತ ಪಾದುಕೆಗಳ ದಶ9ನ ಪಡೆದ ಭಕ್ತರಾದ ಇವರು ಮಾತನಾಡಿ ಈ ಪವ9ತದಲ್ಲಿ ಕಾಡುಪ್ರಾಣಿ ಇದ್ದರು ಯಾವ ಭಕ್ತರಿಗೂ ತೂಂದರೆ ನೀಡಿಲ್ಲ, ಓಷಧೀಯ ಗಿಡಗಳು ಇದ್ದು ಅದರ ಮಾಹಿತಿ ಶಿವರಾತ್ರಿ ದಿನ ಆಗಮಿಸುವ ನಾಗಾ ಸಾಧುಗಳಿಗೆ ಮತ್ತು ಸ್ಥಳೀಯ ಜನರಿಗೆ ಇದೆ ಎಂದರು. ದತ್ತ ದೇವರ ಬಗ್ಗೆ ತಮಗೆ ಆದ ದ್ರಷ್ಟಾಂತ ಹಾಗೂ ಅನುಭವದ ಬಗ್ಗೆ ಹೇಳಿದರು.ಲೋಕಾಪುರದ ಶ್ರೀಮದ್ ಪರಮಹಂಸ ಪೂರ್ಣಾನಂದ ಮಹಾಸ್ವಾಮಿಗಳ ಮಹಾ ಸಂಸ್ಥಾನ ಕ್ಷೇತ್ರ ಜ್ಞಾನೇಶ್ವರ ಮಠದ 12 ನೇ ಪೀಠಾಧಿಪತಿಗಳಾದ ಬ್ರಹ್ಮಾನಂದ ಮಹಾಸ್ವಾಮಿಗಳು,ದಿವ್ಯ ಸಾನಿಧ್ಯ ವಹಿಸಿದ್ದ ಅವರು ಮಾತನಾಡಿ ದೇವರ ಸಾಧನೆ ಮಾಡಲು ಅಚಲವಾದ ನಂಬಿಕೆ,ದ್ರಡ ವಿಶ್ವಾಸ,ಕಠಿಣವಾದ ಪರಿಶ್ರಮ ದಿಂದ ಮಾತ್ರ ಸಾಧ್ಯ ಎಂದರು , ಗಿರಿನಾರ ಪವ9ತ 108 ಬಾರಿ ಹತ್ತಿದ ಹೂಗಾರ ದ ದತ್ತಾ ಮಾಳಿ ಹಾಗೂ 66 ಬಾರಿ ಎರಿ ದತ್ತ ಪಾದುಕೆಗಳ ದಶ9ನ ಪಡೆದ ಬೆಳಗಾವಿಯ ಉದಯ ದೇಶಪಾಂಡೆ ಅವರಿಗೆ ಸನ್ಮಾನಿಸಿ ನೆರೆದ ಭಕ್ತರನ್ನು ಉದ್ದೆಶಿಸಿ ಮಾತನಾಡಿದರು. ನಮ್ಮ ಲೋಕಾಪುರ ಮಠ ಹಿಂದು , ಮುಸಲ್ಮಾನ ಭಕ್ತರ ಸೌಹಾರ್ದಯುತ ಕೇಂದ್ರ ಸ್ಥಾನ ಆಗಿದೆ , ನಮ್ಮ ಮಠಕ್ಕೆ ಮೂಲ ಗುರುಗಳು ಮುಸಲ್ಮಾನ ನಾವೆಲ್ಲ ಶಿಷ್ಯರು ಹಿಂದುಗಳಾಗಿದ್ದೆವೆ.ಮಠದಲ್ಲಿ ಗುರುವಾರ, ರವಿವಾರ ಅಪಾರ ಭಕ್ತರ ಆಗಮನ ಇರುತ್ತದೆ, ಪ್ರತಿಯೊಬ್ಬ ಭಕ್ತರ ಎಲ್ಲ ಸಮಸ್ಯೆಗಳಿಗೆ ನಮ್ಮ ಗುರುಗಳು ನೀಡಿದ ಶಿಲಾಮಣಿಯ ತೀರ್ಥ ಹಾಗೂ ನಾವು ಕೊಡುವ ಭಸ್ಮ ದಿಂದ ಪರಿಹಾರ ಇಲ್ಲಿ ದೂರೆಯುತ್ತದೆ ಮಾಟ, ಮಂತ್ರ, ಭೂತ, ಪಿಶಾಚಿಯ ಪೀಡೆ ಈ ಎರಡು ದಿನ ನಿವಾರಣೆ ಮಾಡಲಾಗುತ್ತದೆ,ಆ ಭಕ್ತರನ್ನು ಬಿಟ್ಟು ಈ ಕಾರ್ಯಕ್ರಮಕ್ಕೆ ನಾನು ಇಂದು ಸಾಧಕರಿಗೆ ಸನ್ಮಾನ ಮಾಡಲು ಬಂದಿದ್ದೇನೆ ಎಂದರು. ಪ್ರಾರ್ಥನೆ ಅನಘಾ ಮಹಿಳಾ ಮಂಡಳಿಯ ಸದಸ್ಯೆಯರಿಂದ, ಕಾರ್ಯಕ್ರಮದ ನಿರೂಪಣೆ ನರೇಂದ್ರ ವಾಳ್ವೇಕರ,ಅತಿಥಿಗಳ ಪರಿಚಯ ಆನಂದ ಕುಲಕರ್ಣಿ, ಪ್ರಸನ್ನ ಜೋಶಿ ವಂದನಾರೆ್ಣ ಮಾಡಿದರು.