ಪಟ್ಟಣದ ಮನ್ನಿಕೇರಿ ಪ್ರವಾಸಿ ಮಂದಿರದಲ್ಲಿ ಸನ್ಮಾನ

Tribute at Mannikeri Tourist Mandir in the town

ಪಟ್ಟಣದ ಮನ್ನಿಕೇರಿ ಪ್ರವಾಸಿ ಮಂದಿರದಲ್ಲಿ  ಸನ್ಮಾನ 

ಬೀಳಗಿ 08 : ಈ ಭಾಗದ ಜನಪ್ರತಿನಿಧಿಗಳು ಹೆಚ್ಚು ರಾಜ್ಯದ ನೀರಾವರಿ ಮಂತ್ರಿಗಳಾಗಿದ್ದಾರೆ. ಆದರೆ ಈ ಭಾಗಕ್ಕೆ ಯಾವುದೇ ನೀರಾವರಿ ಯೋಜನೆಗಳಿಗೆ ಮುಕ್ತಿಸಿಕ್ಕಿಲ್ಲಾ. ಸಾವಿರಾರು ಕೋಟಿ ಅನುದಾನ ಬರುತ್ತೇ ಅದನ್ನು ಯಾರ‌್ಯರಿಗೋ ಹಂಚಿ ಕಮೀಶನ್ ಪಡೆಯುವುದೇ ಅವರ ಸಾಧನೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆರೋಪ ಮಾಡಿದರು.  

  ಪಟ್ಟಣದ ಮನ್ನಿಕೇರಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಇಂದು ಯಾರಾದರೂ ಶಾಸಕರು ಅಥವಾ ಸಚಿವರು ಕೆರೆಗಳನ್ನು ಕಟ್ಟಿರುವ ಉದಾಹರಣೆಗಳು ಇದೆಯಾ. ಚುನಾವಣೆ ಸಂದರ್ಭದಲ್ಲಿ ಸಾವಿರಾರೂ ಕೋಟಿ ಆಸ್ತಿ ಘೋಷಣೆ ಮಾಡಿಕೊಳ್ಳುತ್ತಾರೆ. ಆದರೆ ಒಬ್ಬರು ಜನಹಿತಕ್ಕಾಗಿ ಒಂದು ಕೆರೆ ನಿರ್ಮಿಸಿಲ್ಲಾ. ನಾಗರಿಕರಾದ ನೀವುಗಳು ಶಾಸಕರನ್ನು ಪ್ರಶ್ನಿಸಬೇಕು. ಅವರ ಜೊತೆ ತಿರುಗುವುದು ನಿಲ್ಲಿಸಬೇಕು ಆಗ ಈ ಭಾಗದ ಅಭಿವೃದ್ಧಿ ಸಾಧ್ಯವಾಗುವುದು ಎಂದು ಗುಡುಗಿದರು. 

 ಕರ್ನಾಟಕ ರಾಜ್ಯದ ಶೇ.60ರಷ್ಟು ಆರ್ಥಿಕ ಪರಿಶ್ಥಿತಿಯನ್ನು ನಿಭಾಯಿಸುತ್ತಿರುವುದು ರಾಜಧಾನಿ ಬೆಂಗಳೂರು. ಇದನ್ನು ಹೊರತು ಪಡಿಸಿ ಕರ್ನಾಟಕದಲ್ಲಿ ಆರ್ಥಿಕ ನೀತಿಯನ್ನು ಸೃಷ್ಠಿ ಮಾಡುವಂತ ನಗರ ಯಾವುದು ಇಲ್ಲ. ಉಕ ಪ್ರತ್ಯೇಕ ರಾಜ್ಯ ಮಾಡಿ ಆರ್ಥಿಕ ಮೂಲವನ್ನು ಎಲ್ಲಿಂದ ತರಲು ಸಾಧ್ಯ.  ನಮ್ಮ ಭಾಗದಲ್ಲು ಅಷ್ಟೇ ಹಳೆ ಮೈಸೂರು ಭಾಗದಿಂದ ಅನೇಕರು ಮುಖ್ಯಮಂತ್ರಿಗಳು ಆಗಿದ್ದಾರೆ ಅವರಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಆ ಭಾಗವನ್ನು ಅಭಿವೃದ್ಧಿ ಪಡೆಸಿದವರು ಮೈಸೂರು ಮಹಾರಾಜರು. ಇವರ ಕಾಲದಲ್ಲಿ ಮೈಸೂರು ಭಾಗಕ್ಕೆ  ನೀರಾವರಿ ಯೋಜನೆಗಳು ಆಗಿವೆ ಎಂದರು.  

     ರಾಜಕೀಯ ರಹಿತವಾಗಿ ಹೋರಾಟ ತೆಗೆದುಕೊಂಡು ಹೋದಾಗ ಹೋರಾಟಗಳು ಯಶಸ್ವಿಯಾಗುತ್ತವೆ. ಉತ್ತರ ಕರ್ನಾಟಕದ ಎಲ್ಲ ಕರವೇ ಅಧ್ಯಕ್ಷರು ಸೇರಿ ನಿಮ್ಮ ಜನಪ್ರತಿನಿಧಿಗಳನ್ನು ಕರೆದುಕೊಂಡು ಬೆಂಗಳೂರಿಗೆ ಬನ್ನಿ. ನಿಯೋಗ ಹೋಗೋಣ, ಒಂದು ದಿನ ಪೂರ್ಣ ಮುಖ್ಯಮಂತ್ರಿಗಳ ಮತ್ತು ಸಂಬಂಧಪಟ್ಟ ಸಚಿವರ ಜೊತೆ ಚರ್ಚೆಮಾಡಿ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ನೀರಾವರಿಗಳ ಬಗ್ಗೆ ಮಾತನಾಡಿ ಕೊಡುವವರೆಗೆ ನಾವು ತೆರಳಲ್ಲ ಎಂದು ಅಲ್ಲೆ ಕುಳಿತುಕೊಂಡು ಹೋರಾಟ ಮಾಡಿದರೆ ಅಭಿವೃದ್ಧಿಯ ಕೆಲಸಗಳಾಗುತ್ತವೆ. ನೀವುಗಳು ಇಲ್ಲಿ ಕುಳಿತು ಧರಣಿ ಸತ್ಯಾಗ್ರಹ ಮಾಡಿದರೆ ಅವರಿಗೆ ನಿಮ್ಮ ಕೂಗು ಕೇಳುವುದಿಲ್ಲ. ಮೂಗು ಹಿಡಿದರೆ ಬಾಯಿ ಬಿಡುತ್ತಾರಲ್ಲಾ ಅದೇ ರೀತಿ ನಾವು ಅವರ ಮೂಗು ಹಿಡಿಯೋಣ ಆಗ ಅವರು ಭಾಯಿ ಬಿಡುತ್ತಾರೆ. ರಾಜ್ಯದ ನೀರಾವರಿ ಯೋಜನೆಗಳಾಗಲಿ, ಉದ್ಯೋಗವಾಗಲಿ, ಅಭಿವೃದ್ಧಿ ಕೆಲಸಗಳಾಗಲಿ, ಯಾವುದೇ ಹೋರಾಟವಾಗಲಿ ಅದಕ್ಕೆ ನಮ್ಮ ಕರವೇ ಸದಾ ಹೋರಾಟ ಜೊತೆ ನಾವು ಇರುತ್ತೇವೆ ಎಂದರು. 

ಕರವೇ ರಾಜ್ಯ ಗೌರವಧ್ಯಕ್ಷೆ ಅಶ್ವಿನಿ ಗೌಡ್, ರಾಜ್ಯ ಕಾರ್ಯದರ್ಶಿ ಶನಿರೆಪ್ಪ, ಜಿಲ್ಲಧ್ಯಕ್ಷ ಬಸವರಾಜ್ ದರಮಂತಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಹಿರೇಮಠ, ತಾಲೂಕಾಧ್ಯಕ್ಷ ರಾಚಪ್ಪ ಸನದಿ, ಹುಚ್ಚಪ್ಪ ಯಡಹಳ್ಳಿ, ಪ್ರವೀಣಗೌಡ ಪಾಟೀಲ್, ಆನಂದ್ ಮಂಟೂರ್, ರಾಜು ನ್ಯಾಮಗೌಡ್, ಲಕ್ಷ್ಮಣ ಜಾಲಪೂರ್, ವಿಶ್ವನಾಥ ಬೆಟಗೇರಿ,  ವಿಕ್ರಂ ಹೊಸಮನಿ, ಮನೋಜ್ ಹಾದಿಮನಿ ಇತರರು ಇದ್ದರು.