ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ರಕರಣಗಳ ವಿಚಾರಣೆ: ರಾಜಾಸೋಮಶೇಖರ

ಕೊಪ್ಪಳ 19: ಕರೋನಾ ವೈರಸ್ ಕಾಯಿಲೆ ಹರಡುವಿಕೆ ಹಿನ್ನೆಲೆ ತುರ್ತು  ಸಂದರ್ಭಗಳಲ್ಲಿ ಮಾತ್ರ ತುತರ್ು ಪ್ರಕರಣಗಳನ್ನು ಪಕ್ಷಗಾರರ ವಕೀಲರುಗಳು ಹಾಜರಾದಾಗ ಮಾತ್ರ ನ್ಯಾಯಾಲಯಗಳು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜಾಸೋಮಶೇಖರ ಸಿ.ಆರ್. ಅವರು ಹೇಳಿದರು. 

ಕೋವಿಡ್-19 ಕರೋನಾ ವೈರಸ್ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳಲು ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಕೋವಿಡ್-19 ಕರೋನಾ ವೈರಸ್ ಕಾಯಿಲೆ ಹರಡುವುದರ ಸಂಬಂಧ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿದ್ದು, ಇದರ ಪೂರಕವಾಗಿ ನ್ಯಾಯಾಲಯಗಳಿಗ ಸಂಬಂಧಪಟ್ಟಂತೆ ಉಚ್ಚ ನ್ಯಾಯಾಲಯದ ಆದೇಶದಂತೆ ತುರ್ತು  ಸಂಧರ್ಭಗಳಲ್ಲಿ ಮಾತ್ರ ತುರ್ತು  ಪ್ರಕರಣಗಳನ್ನು ಪಕ್ಷಗಾರರ ವಕೀಲರುಗಳು ಹಾಜರಾದಾಗ ಮಾತ್ರ ನ್ಯಾಯಾಲಯಗಳು ಪ್ರಕರಣದ ವಿಚಾರಣೆ ನಡೆಸಬೇಕು.  ತುರ್ತು  ಪ್ರಕರಣಗಳಲ್ಲಿ ಮಾತ್ರ ಸಾಕ್ಷಿಗಳ ಸಾಕ್ಷವನ್ನು ನ್ಯಾಯಾಲಯದಲ್ಲಿ ಪಡೆಯಬೇಕು.  ವಕೀಲರು ಯಾವುದೇ ರೀತಿಯ ಆತಂಕ ಪಡಬಾರದೆಂದು ಕ್ರಿಮಿನಲ ಮೊಕದ್ದಮೆಗಳಲ್ಲಿ ಆರೋಪಿಗಳು ಗೈರು ಹಾಜರಾದರೂ ಸಹ ಅವರ ಪರ ವಕೀಲರು ವಿನಾಯತಿ ಅರ್ಜಿಯನ್ನು ಸಲ್ಲಿಸಬಹುದು.  ಒಂದು ವೇಳೆ ಆರೋಪಿಯು ಮತ್ತು ವಕೀಲರು ಹಾಜರಾಗದೇ ಇದ್ದಲ್ಲಿ ವಿನಾಯತಿ ಅರ್ಜಿ  ಸಲ್ಲಿಸದೆ ಇದ್ದಲ್ಲಿ ನ್ಯಾಯಾಲಯಗಳು ಯಾವುದೇ ಕಾರಣಕ್ಕೂ ಉಚ್ಚ ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೂ  ವಾರೆಂಟ್ ಹೊರಡಿಸಬಾರದು. ಹಾಗೂ ಮುಂದಿನ ಆದೇಶದವರೆಗೆ ಎಲ್ಲಾ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯಾಲಯಕ್ಕೆ ಹಾಜರಾಗಲು ಒತ್ತಾಯ ಮಾಡಬಾರದು. ಆ ಕಾರಣ ಅರೋಪಿಗಳು ಸಹಾ ಯಾವುದೇ ರೀತಿಯ ಆತಂಕ ಪಡಬಾರದು.  ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ವಕೀಲರು ಹಾಗೂ ಕಕ್ಷಿದಾರರು ಯಾವುದೇ ಪ್ರಕರಣಗಳಲ್ಲಿ ಹಾಜರಾಗದಿದ್ದಲ್ಲಿ ನ್ಯಾಯಾಲಯಗಳು ಯಾವುದೇ ವ್ಯತಿರಿಕ್ತ ಆದೇಶ ಹೊರಡಿಸಬಾರದು.  ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.  ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಮಾತನಾಡಿ, ಎಲ್ಲರೂ ಸೊಂಕು ಪೀಡಿತರ ಸಂಪರ್ಕದಿಂದ ದೂರವಿರುಬೇಕು.  ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.  ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು.  ಕೆಮ್ಮುವಾಗ, ಸೀನುವಾಗ ಕೈವಸ್ತ್ರ ಉಪಯೋಗಿಸಬೇಕು.ಊಸಿರಾಟ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.  ಹಾಗೂ ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು.  ಹಾಗೂ ಸಮೀಪದ ಸರ್ಕಾರಿ ಆಯುಷ್ ಇಲಾಖೆಯ ಆಸ್ಪತ್ರೆಗೆ ಭೇಟಿ ನೀಡಬೇಕು.  ಹಾಗೂ ಎಲ್ಲಾ ನ್ಯಾಯಾಧೀಶರು, ಸಿಬ್ಬಂದಿ ವರ್ಗದವರು, ನ್ಯಾಯವಾದಿಗಳು ಹಾಗೂ ಕಕ್ಷಿದಾರರು ಜಿಲ್ಲಾ ಆರೋಗ್ಯ ಇಲಾಖೆ ಯಿಂದ ಬಂದ ಸಿಬ್ಬಂದಿ ವರ್ಗದವರ ಮೂಖಾಂತರ ನ್ಯಾಯಾಲಯದ ಆವರಣದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸೋಂಕು ಯಾವುದೇ ವೈಕ್ತಿಯಿಂದ ಕಂಡುಬಂದಿರುವುದಿಲ್ಲ ಎಂದರು. 

ಸಭೆಯಲ್ಲಿ ಎಫ್.ಟಿ.ಸಿ ಸ್ಪೆಷಲ್ ಪೋಕ್ಸೊ ಅಡಿಷ್ನಲ್ ಜಿಲ್ಲಾ ನ್ಯಾಯಾಧೀಶರಾದ ರೇಣುಕಾ ಕುಲಕರ್ಣಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್. ಕುಮಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಟಿ.ಸ್ರೀನಿವಾಸ್, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಪಾಟೀಲ್, ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮನು ಶರ್ಮಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹನಮೇಶ ಹೆಚ್ ಮುರಡಿ ಸೇರಿದಂತೆ ವಕೀಲರು ಉಪಸ್ಥಿತರಿದ್ದರು.  ಕೋರೊನಾ ವೈರಸ್ ಹರಡುವಿಕೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಎಲ್ಲಾ ನ್ಯಾಯಾಧೀಶರು, ನ್ಯಾಯಾವಾದಿಗಳು, ಸಿಬ್ಬಂದಿ ವರ್ಗದವರು ಹಾಗೂ ಕಕ್ಷಿದಾರರಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಗಿದ್ದು, ಯಾವುದೇ ವ್ಯಕ್ತಿಗಳಲ್ಲಿ ಸೋಂಕು ಕಂಡುಬಂದಿರುವುದಿಲ್ಲ.