ಎಚ್‌.ಐ.ವಿ ಸೋಂಕಿತರನ್ನು ಪ್ರೀತಿ ವಿಶ್ವಾಸದಿಂದ ಕಾಣಿರಿ : ನ್ಯಾಯದೀಶ ಸುನೀಲ

Treat HIV patients with love and trust: Justice Sunila

ಶಿಗ್ಗಾವಿ 04: ಹೆಚ್‌.ಐ.ವ್ಹಿ ಸೋಂಕಿತರನ್ನು ಪ್ರೀತಿ ವಿಶ್ವಾಸದಿಂದ ಕಂಡಾಗ ಮಾತ್ರ ಅವರು ನಮ್ಮಂತೆ ಮುಖ್ಯವಾಹಿನಿಗೆ ಬರುತ್ತಾರೆ ಎಂದು ಹಿರಿಯ ದಿವಾಣಿ ನ್ಯಾಯದೀಶ ಸುನೀಲ ತಳವಾರ ಹೇಳಿದರು. 

ಪಟ್ಟಣದ ಜೆ.ಎಂ.ಜೆ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಏಡ್ಸ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸಿ ಮಾತನಾಡಿದ ಅವರು ಎಲ್ಲರಂತೆ ಇವರು ಸಹಿತ ಬದುಕಿ ಬಾಳಬೇಕು ಅಂದಾಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ ಹಾಗೂ ಕಾನೂನು ಬಗ್ಗೆ ಮಾಹಿತಿಯನ್ನು ಪಡೆದುಕೊಂಡರೆ ಒಳ್ಳೆಯದು ಎಂದರು. 

ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ ಮಾತನಾಡಿ ವಿದ್ಯಾರ್ಥಿಗಳು ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು  ಹಾಗೂ ಸರಕಾರಿ ಆಸ್ಪತ್ರೆಯ ಬಗ್ಗೆ ಇರುವ ಕೀಳರಿಮೆಯನ್ನು ಇಂದಿನ ಯುವ ಸಮುದಾಯ ತೊಡೆದುಹಾಕಬೇಕು ಮತ್ತು ಆರೋಗ್ಯದ ಬಗ್ಗೆ ಮುಂಜಾಗ್ರತೆವಹಿಸಿದರೆ ಅನಾರೋಗ್ಯದಿಂದ ದೂರ ಇರಬಹುದು ಎಂದು ಕಿವಿ ಮಾತು ಹೇಳಿದರು. 

ತಜ್ಞ ವೈದ್ಯೆ ಡಾ.ರಾಜೇಶ್ವರಿ  ಮಾತನಾಡಿ  ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಆಗಿರುವ ಕಾರಣ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಮತ್ತು ಹೆಚ್‌.ಐ.ವ್ಹಿ ಸೋಂಕಿತರ ಬಗ್ಗೆ ಕಳಂಕ ಮತ್ತು ತಾರತಮ್ಯದಿಂದ ನೋಡದೇ ಪ್ರೀತಿ ವಿಶ್ವಾಸದಿಂದ ಕಾಣೋಣ ಎಂದರು. 

ಎ.ಆರ್‌.ಟಿ ಹಿರಿಯ ಆಪ್ತಸಮಾಲೋಚಕ ಸುಧಾಕರ ದೈವಜ್ಞ ಮಾತನಾಡಿ ಸೋಂಕಿತರಿಗೆ ಅನೇಕ ಸೌಲಭ್ಯಗಳು ಇದ್ದು ಅದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು. 

ಭಾಕ್ಸ ಸುದ್ದಿ : ಕಾರ್ಯಕ್ರಮ ಪೂರ್ವದಲ್ಲಿ ಜೆ.ಎಂ.ಜೆ.ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಹೆಚ್‌.ಐ.ವ್ಹಿ ಏಡ್ಸ ಜಾಥಾ ಕಾರ್ಯಕ್ರಮ ನೇರವೇರಿತು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ದಿವಾಣಿ ನ್ಯಾಯದೀಶೆ ಅಶ್ವೀನಿ ಚಂದ್ರಕಾಂತ, ಅಧ್ಯಕ್ಷತೆ ಪ್ರಾಂಶುಪಾಲೆ ಸಿಸ್ಟರ್ ಅನಿಜಾರ್ಜ, ನ್ಯಾಯವಾದಿ ಚೆನ್ನಮ್ಮ ಬಡ್ಡಿ, ಸುರೇಶ ಹೆಚ್, ಸರೋಜಾ ಹರಿಜನ, ಎಸ್‌.ಬಿ.ಕಟ್ಟಿಮನಿ, ರಾಮನಗೌಡ. ಪಾಟೀಲ, ಹನುಮಂತ, ಗರೀಬಸಾಬ, ಇಂದಿರಾ, ಪ್ರೇಮಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ಜೆ.ಎಂ.ಜೆ.ಮಹಾವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿ ಶಮ್ಸತಬರೀಜ ಸ್ವಾಗತಿಸಿದರು, ಆಪ್ತಸಮಾಲೋಚಕಿ ರೇಣುಕಾ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.